ಮೂರ್ನಾಡು, ಏ. 16: ಗ್ರಾಮೀಣ ಮಟ್ಟದಲ್ಲಿ ಎಳೆಯ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸುವ ಪ್ರಯತ್ನವಾಗಬೇಕೆಂದು ಮರಗೋಡು ಲತಾ ಯುವತಿ ಮಂಡಳಿಯ ಮಾಜಿ ಅಧ್ಯಕ್ಷೆ ಚೆರಿಯಮನೆ ತಾರಾದೇವಿ ಜೀವರತ್ನ ಹೇಳಿದರು.
ಮರಗೋಡು ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಭಾರತೀಯ ನೃತ್ಯ ಶಾಲೆಯ ನೃತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮರಗೋಡು ಗಣಪತಿ ದೇವಸ್ಥಾನದ ಕಾರ್ಯದರ್ಶಿ ಮಾಳಿಗೆಮನೆ ವೆಂಕಟೇಶ್ ಮಾತನಾಡಿ, ಭರತನಾಟ್ಯ, ಜಾನಪದ ನೃತ್ಯಗಳು ಪ್ರಾಚೀನ ಕಾಲದಿಂದಲೂ ಭಾರತೀಯ ಸಂಸ್ಕøತಿಯನ್ನು ಬಿಂಬಿಸುವಂತದ್ದಾಗಿದೆ ಎಂದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯ ಮಂದ್ರೀರ ಮೋಹನ್‍ದಾಸ್, ಮರಗೋಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಮರಗೋಡು ಗೌಡ ಸಮಾಜದ ಅಧ್ಯಕ್ಷ ಕಟ್ಟೆಮನೆ ಜರ್ನಾಧನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮರಗೋಡು ಗೌಡ ಸಮಾಜದ ಖಜಾಂಚಿ ಉಳುವಾರನ ಹೀರಾಲಾಲ್ ವಹಿಸಿದ್ದರು. ವೇದಿಕೆಯಲ್ಲಿ ಮರಗೋಡುವಿನ ಮಂಜುನಾಥ ಟ್ರೇಡರ್ಸ್ ಮಾಲೀಕ ಮಾಳಿಗೆಮನೆ ದೇವಯ್ಯ ಮರಗೋಡುವಿನ ಕಾಫಿ ಬೆಳೆಗಾರರಾದ ಉಳುವಾರನ ಪ್ರಭಾಕರ್, ಕಟ್ಟೆಮನೆ ಹರೀಶ್ ಪೂಣಚ್ಚ, ಕಾನಡ್ಕ ತಿಲಕರಾಜ್, ನೃತ್ಯ ಶಿಕ್ಷಕಿ ಜಲಜ ನಾಗರಾಜ್ ಉಪಸ್ಥಿತರಿದ್ದರು.
ನೃತ್ಯ ಶಾಲೆಯ 31 ಕಲಾವಿದರು ಭರತನಾಟ್ಯ, ಜಾನಪದ ನೃತ್ಯ, ಮಣಿಪುರಿ ನೃತ್ಯ, ಕರಗ ನೃತ್ಯ, ಶಿವ ತಾಂಡವ, ಅರೆಭಾಷೆ ನೃತ್ಯ ಪ್ರದರ್ಶನ ನೀಡಿದರು.
ನೃತ್ಯ ಶಿಕ್ಷಕಿ ಜಲಜ ನಾಗರಾಜ್ ಸ್ವಾಗತಿಸಿ, ಹೊಸೊಕ್ಲು ಹೇಮರಾಜ್ ಕಾರ್ಯಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.