ವೀರಾಜಪೇಟೆ, ಏ. 16: ಕೆದಮುಳ್ಳೂರು ಕ್ರಿಕೆಟ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ದಿ. ನಾರಾಯಣ ಶರ್ಮ-ಸುಶೀಲ ಶರ್ಮ ದಂಪತಿಯ ಸ್ಮರಣಾರ್ಥ ಎರಡನೇ ವರ್ಷದ ಸೂಪರ್ ನೈನ್ ಕ್ರಿಕೆಟ್ ಪಂದ್ಯಾಟದಲ್ಲಿ ವೀರಾಜಪೇಟೆಯ ನ್ಯಾಷನಲ್ ಕ್ರಿಕೆಟರ್ಸ್ ತಂಡ ಜಯಗಳಿಸಿತು.

ಅಂತಿಮ ಪಂದ್ಯಾಟದಲ್ಲಿ ಯೂತ್ ಸ್ಟಾರ್ ಹೆಗ್ಗಳ ತಂಡ ರನ್ನರ್ಸ್ ಟ್ರೋಫಿಗೆ ತೃಪ್ತಿಪಡಬೇಕಾಯಿತು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ಚೋಟು ಬಿದ್ದಪ್ಪ, ಕೆ.ಜಿ. ಗುರು, ಮಾತಂಡ ಮೊಣ್ಣಪ್ಪ, ಚೆನಿಯಪಂಡ ಅಚ್ಚಯ್ಯ, ಎಂ. ಸುಬ್ಬಯ್ಯ, ಕಿರಣ್ ಕುಮಾರ್, ಚುಕ್ಕು ದೇವಯ್ಯ, ಎಂ.ಎಂ. ಪರಮೇಶ್ವರ್ ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.