ಮಡಿಕೇರಿ, ಏ. 16: ವೀರಾಜಪೇಟೆ ಕಾವೇರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕದ ಸಮಾರೋಪ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮುಲ್ಲೆಂಗಡ ಮಧೋಶ್ ಪೂವಯ್ಯ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವನ್ನು ತಿಳಿಸಿದರು.
ಹಿರಿಯ ಸ್ವಯಂ ಸೇವಕರಾದ ಶಿವಕುಮಾರ್, ಭಾಗ್ಯಶ್ರೀ, ಹರ್ಷಿತ್, ದೇವಯ್ಯ, ಸಂಜಿತ್, ಬಿದ್ದಪ್ಪ, ಪೂವಯ್ಯ, ಚೆನ್ನಪ್ಪ, ಪ್ರಶಾಂತ್, ಜೀವಿತ, ಮೈನಾ, ಗಂಗಮ್ಮ, ಮುತ್ತಮ್ಮ, ಗಾನ, ಇನಿತಾ ಇವರುಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು ಹಾಗೂ ಕಾಲೇಜಿನ ಹಿಂದಿ ಉಪನ್ಯಾಸಕ ಪ್ರೋ. ಪದ್ಮನಾಭ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್‍ನ ಅಧಿಕಾರಿ ಸೋಮಣ್ಣ, ಯೋಜನಾ ಧಿಕಾರಿಗಳಾದ ಅಂಬಿಕಾ ಹಾಗೂ ನಾಗರಾಜು ಉಪಸ್ಥಿತರಿದ್ದರು.