ನಾಪೆÇೀಕ್ಲು, ಏ. 14: ಜಿಲ್ಲೆಯಲ್ಲಿ ಸಣ್ಣ ಸಮಸ್ಯೆ ಉಂಟಾದರೂ ಅದನ್ನು ದೊಡ್ಡದಾಗಿ ಬಿಂಬಿಸುತ್ತಿರುವವರು ಸರಕಾರ ಮತ್ತು ಅಧಿಕಾರಿಗಳು ಎಂದು ಜಿಲ್ಲಾ ಕಾಫಿ ಬೆಳೆಗಾರರ ಒಕ್ಕೂಟ, ಸೇವ್ ಕೊಡಗು ಫೆÇೀರಂ, ಜಿಲ್ಲಾ ಜಯಕರ್ನಾಟಕ ಸಂಘಟನೆ ಆರೋಪಿಸಿದೆ.
ಈ ಸಂಘಟನೆಗಳ ಪರ ಪತ್ರಿಕಾ ಹೇಳಿಕೆ ನೀಡಿದ ಬಿದ್ದಾಟಂಡ ದಿನೇಶ್, ಜಿನ್ನು ನಾಣಯ್ಯ ಜನಪ್ರತಿನಿಧಿಗಳಿಗೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಓಟಿಗಾಗಿ, ತಮ್ಮ ಕುರ್ಚಿ ಭದ್ರಪಡಿಸಲು, ಕೋಟ್ಯಾಂತರ ರೂ. ಸಂಪಾದಿಸುವ ಕಾರಣದಿಂದ ಬಡವರಿಗೆ ಪೆÇಳ್ಳು ಭರವಸೆ ನೀಡಿ ಅವರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ದೂರಿದರು.
ದಿಡ್ಡಳಿಯಲ್ಲಿ ಹಿಂದಿನಿಂದಲೂ ಆದಿವಾಸಿಗಳು ವಾಸಿಸುತ್ತಿದ್ದಾರೆ. ಇವರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿದೆ. ಈ ಬಗ್ಗೆ ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಮೊದಲೇ ತಿಳಿದಿದ್ದರೂ ಜಾಣ ಕುರುಡು ಪ್ರದರ್ಶಿಸಿದ್ದಾರೆ. ಈಗ ಪ್ರಕರಣದ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಜಮ್ಮಾ ಬಾಣೆ ಸಮಸ್ಯೆಯನ್ನು ಇಂದಿಗೂ ಸರಕಾರಕ್ಕೆ ಪರಿಹರಿಸಲು ಸಾಧ್ಯವಾಗಿಲ್ಲ. ಸರಕಾರ ಮಟ್ಟದಲ್ಲಿ ಅದನ್ನು ಇತ್ಯರ್ಥಪಡಿಸಿರುವದಾಗಿ ಹೇಳಿದ್ದರೂ ಅಧಿಕಾರಿಗಳು ಇದಕ್ಕೆ ಸ್ಪಂದಿಸುತ್ತಿಲ್ಲ. ಸಮಸ್ಯೆಯ ಮೂಲಕ ಬೆಳೆಗಾರರನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಜೀತ ಪದ್ಧತಿ ಇದೆ ಎಂದು ಕಂದಾಯ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ ಹೇಳಿಕೆ ನೀಡಿದ್ದಾರೆ. ಆದರೆ ಇಲ್ಲಿ ಜೀತ ಪದ್ಧತಿ ಇರುವ ಬಗ್ಗೆ ಜಿಲ್ಲೆಯ ಯಾವ ಜನತೆಗೂ ತಿಳಿದಿಲ್ಲ. ಒಂದು ವೇಳೆ ಜೀತ ಪದ್ಧತಿ ಇದ್ದರೆ ಅದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಮಂತ್ರಿಗಳು, ಅಧಿಕಾರಿಗಳು ಯಾಕೆ ಸುಮ್ಮನಿದ್ದಾರೆ? ಎಂದು ಪ್ರಶ್ನಿಸಿದ ಅವರು ದಿಡ್ಡಳ್ಳಿಯಲ್ಲಿ ಸರಕಾರ ಎಸಗಿದ ತಪ್ಪನ್ನು ಮರೆಮಾಚಲು ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದರು.
ದಿಡ್ಡಳ್ಳಿಯ ಆದಿವಾಸಿಗಳನ್ನು ಒಕ್ಕಲೆಬ್ಬಿಸಲು ಜಿಲ್ಲೆಯ ಯಾವ ಜನತೆಯೂ ಸರಕಾರವನ್ನು, ಅರಣ್ಯ ಇಲಾಖೆಯನ್ನು ಕೋರಿಲ್ಲ. ಸರಕಾರವೇ ಸಮಸ್ಯೆಯನ್ನು ಸೃಷ್ಟಿಸುತ್ತಿದೆ. ರೈತರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿರುವ ಜನ ಪ್ರತಿನಿಧಿಗಳು, ಅಧಿಕಾರಿಗಳು ಈ ತಪ್ಪಿಗೆ ಶಿಕ್ಷೆ ಅನುಭವಿಸಲು ಅರ್ಹರಾಗಿದ್ದಾರೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಪರಿಸ್ಥಿತಿ ಉಂಟಾಗಿದೆ. ಇವರಿಗೆ ಶಿಕ್ಷೆ ವಿಧಿಸುವವರು ಯಾರು? ಎಂದು ಹೇಳಿದ ಅವರು ಇನ್ನಾದರೂ ಬಡ ಜನತೆಯ, ರೈತರ ಬದುಕಿನಲ್ಲಿ ಚೆಲ್ಲಾಟವಾಡದಂತೆ ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.