ಮಡಿಕೆÉೀರಿ, ಏ. 14 : ಮಡಿಕೇರಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿರುವ ಸುಮಾರು 72 ವಸತಿ ರಹಿತ ಬಡ ಕುಟುಂಬಗಳಿಗೆ ಗಾಳಿಬೀಡು ಗ್ರಾಮ ದಲ್ಲಿ ಪೈಸಾರಿ ಜಾಗವನ್ನು ಗುರುತಿಸಿ ಹಂಚುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಬೇಕೆಂದು ಗಾಳಿಬೀಡಿನ ಶ್ರೀ ಭದ್ರಕಾಳಿ ನಿವೇಶನ ರಹಿತರ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಟಿ. ಮಾದಪ್ಪ, ಜಿಲ್ಲಾಡಳಿತ ಬಡವರ ಪರ ಕಾಳಜಿ ವಹಿಸಿ 72 ಕುಟುಂಬಗಳಿಗೆ ನಿವೇಶನ ಒದಗಿಸುವ ಮೂಲಕ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯಿಸಿದರು. ಬಡ ಕುಟುಂಬಗಳ ಪರ ನಿವೇಶನದ ಹಕ್ಕಿಗಾಗಿ ತಾವು ಅರ್ಜಿಗಳ ಮೂಲಕವೇ ಜಿಲ್ಲಾಡಳಿತದ ಗಮನ ಸೆಳೆಯುತ್ತಿದ್ದು, ಗಾಳಿಬೀಡು, ಸಿದ್ದಾಪುರ, ಪಾಲಿಬೆಟ್ಟ, ಮಕ್ಕಂದೂರು ಹಾಗೂ ಬೋಯಿಕೇರಿ ವ್ಯಾಪ್ತಿಯ ಕುಟುಂಬಗಳು ಅರ್ಜಿದಾರರಾಗಿದ್ದಾರೆ ಎಂದು ತಿಳಿಸಿದರು.
ಲೈನ್ ಮನೆಗಳಲ್ಲಿ ವಾಸಿಸುತ್ತಿ ರುವ ಈ ನಿರಾಶ್ರಿತ ಕುಟುಂಬಗಳು ಕಳೆÉದ ಎರಡು ಮೂರು ವರ್ಷಗಳಿಂದ ನಿವೇಶನ ನೀಡುವಂತೆ ಅರ್ಜಿಸಲ್ಲಿಸುತ್ತಾ ಬಂದಿದ್ದು, ಗ್ರಾಮ ಪಂಚಾಯ್ತಿಗಳಿಂದ ಇಲ್ಲಿಯವರೆಗೆ ಯಾವದೇ ಸ್ಪಂದನ ದೊರಕಿಲ್ಲವೆಂದು ಎ.ಟಿ. ಮಾದಪ್ಪ ಆರೋಪಿಸಿದರು. ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 4 ಎಕರೆ ಪೈಸಾರಿ ಜಾಗವನ್ನು ಗುರುತಿಸಲಾಗಿದ್ದು, ಬಡವರಿಗೆ ಈ ಜಾಗವನ್ನು ಹಂಚಲು ಕೆಲವರು ತಕರಾರು ತೆಗೆದಿದ್ದಾರೆ. ಇದರಿಂದಾಗಿ ಅರ್ಜಿ ವಿಲೆÉೀವಾರಿ ವಿಳಂಬವಾಗುತ್ತಿದ್ದು, ಜಿಲ್ಲಾಡಳಿತ ಬಡವರ ಬೇಡಿಕೆಯನ್ನು ಗಂಭೀರ ವಾಗಿ ಪರಿಗಣಿಸಬೇಕೆಂದರು.
ಐದು ಗ್ರಾಮಗಳಲ್ಲಿರುವ ನಿರಾಶ್ರಿತ ಬಡವರು ಗಾಳಿಬೀಡಿನಲ್ಲಿ ಗುರುತಿಸಲಾಗಿರುವ ಮೇಪಾಜೆ ಎಂಬ ಪ್ರದೇಶದಲ್ಲಿ ನೆಲೆ ಕಂಡುಕೊಳ್ಳಲು ಸಿದ್ದರಿದ್ದು, ತಕ್ಷಣ ಜಿಲ್ಲಾಡಳಿತ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳಬೇಕೆಂದು ಎ.ಟಿ. ಮಾದಪ್ಪ ಒತ್ತಾಯಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯ್ತಿಗೆ ಈಗಾಗಲೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದರು. ಬೇಡಿಕೆ ಈಡೇರುವಲ್ಲಿಯ ವರೆಗೆ ಶಾಂತಿಯುತವಾಗಿ ಹೋರಾಟ ವನ್ನು ಮುಂದುವರಿಸುವದಾಗಿ ಮಾದಪ್ಪ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಅರ್ಜಿದಾರರಾದ ಎ.ಚಿತ್ರ, ಪಿ.ಐ.ಕೃಷ್ಣಪ್ಪ, ಕೆ.ಎಂ. ಬೇಬಿ, ಎಂ.ಎಸ್. ವಣೇಶ್ ಹಾಗೂ ಮಣಿಕಂಠ ಉಪಸ್ಥಿತರಿದ್ದರರು.