ಮಡಿಕೇರಿ, ಏ. 14: ಇಲ್ಲಿಗೆ ಸಮೀಪದ ಕಗ್ಗೋಡ್ಲು ಶ್ರೀ ಭಗವತಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 10ರಿಂದ ಆರಂಭಗೊಂಡಿದ್ದು, ತಾ. 17ರವರೆಗೆ ನಡೆಯಲಿದೆ. ತಾ. 15ರಂದು (ಇಂದು) ಪ್ರಾತಃಕಾಲ 5 ಗಂಟೆಗೆ ದೇವರ ನೃತ್ಯ, ಮಹಾಪೂಜೆ, ನವಗ್ರಹ ವೃಕ್ಷ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ರಿಂದ ಪರಿವಾರ ದೇವತಾಬಲಿ, ನೃತ್ಯಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ತಾ. 16ರಂದು ಬೆಳಿಗ್ಗೆ 11 ಗಂಟೆಗೆ ಏಕಾದಶ ರುದ್ರಾಭಿಷೇಕ, ಆಶ್ಲೇಷ ಬಲಿ, ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ತಾ. 17ರಂದು ಬೆಳಿಗ್ಗೆ 9 ಗಂಟೆಗೆ ಕಲಶಪೂಜೆ, ಕೊಡಿಮರ ಇಳಿಸುವದು, ಮಧ್ಯಾಹ್ನ ಕಲಶಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.