ನಾಪೋಕ್ಲು, ಮಾ. 31: ಸ್ಥಳೀಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ತಾ. 2 ರಿಂದ ಒಂದು ತಿಂಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸುವಂತೆ ಇಲ್ಲಿಯ ಮಹಿಳಾ ಸಮಾಜದಲ್ಲಿ ಅಕಾಡೆಮಿ ಅಧ್ಯಕ್ಷ ಕಲಿಯಂಡ ಸಾಬು ಅಯ್ಯಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಬಾರಿ ಬಿದ್ದಾಟಂಡ ಹಾಕಿ ಉತ್ಸವ ಆಯೋಜಿಸಿರುವದರಿಂದ ಶಿಬಿರವನ್ನು ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಆವರಣದ ಕ್ರೀಡಾಂಗಣದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮನ ಮುರಳಿ ಕರುಂಬಮ್ಮಯ್ಯ ಹಾಗೂ ಗ್ರಾ.ಪಂ. ಅಧ್ಯಕ್ಷ ಇಸ್ಮಾಯಿಲ್ ಭಾಗವಹಿಸಲಿದ್ದು, ಪೋಷಕರು ಅಂದೇ ತಮ್ಮ ಮಕ್ಕಳನ್ನು ನೋಂದಾಯಿಸಿಕೊಳ್ಳಲು ನಿರ್ಧರಿಸಲಾಯಿತು.
ಈ ಸಂದರ್ಭ ಅಕಾಡೆಮಿಗೆ ಕ್ರೀಡಾಪರಿಕರಗಳನ್ನು ನೀಡಿದ ಹಾಕಿ ಇಂಡಿಯಾದ ಎ.ಬಿ. ಸುಬ್ಬಯ್ಯ ಹಾಗೂ ಬ್ರಾಡ್ ವೇ ಸಂಸ್ಥೆಯವರ ಕಾರ್ಯವನ್ನು ಶ್ಲಾಘಿಸಲಾಯಿತು.
ಖಜಾಂಚಿ ಕೇಟೋಳಿರ ಎಸ್. ಕುಟ್ಟಪ್ಪ, ನಿರ್ದೇಶಕ ಪಾಂಡಂಡ ಜೋಯಪ್ಪ, ಬಿದ್ದಾಟಂಡ ಮಮತ ಚಿಣ್ಣಪ್ಪ, ಮುಂಡಂಡ ಕವಿತಾ ಇನ್ನಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಡಾ. ಬೊಪ್ಪಂಡ ಜಾಲಿ ಬೋಪಯ್ಯ ವಂದಿಸಿದರು.