ಆಲೂರು-ಸಿದ್ದಾಪುರ, ಮಾ. 31: ಸಣ್ಣ ಮಕ್ಕಳು ಸಹ ವ್ಯಾವಹಾರಿಕವಾಗಿ ಎಲ್ಲವನ್ನು ಅರಿತಿರಬೇಕು ಎಂದು ಕೊಡ್ಲಿಪೇಟೆಯ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಅರ್ಜುನ್ ಅಭಿಪ್ರಾಯಪಟ್ಟರು. ಸಮೀಪದ ನ್ಯಾಯದಳ್ಳ ಸರ್ಕಾರಿ ಪ್ರಾಥಮಿಕ ಶಾಲೆಗೆ ತಟ್ಟೆ ಹಾಗೂ ಲೋಟಗಳನ್ನು ಬ್ಯಾಂಕ್ ಮೂಲಕ ವಿತರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಬ್ಯಾಂಕ್‍ಗಳು ಮುಂದೆ ಬಂದಿರುವದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಮಂಜುಳ ಮಣಿ ಶಿಕ್ಷಕಿ ಕವಿತ, ಫಯಾಜ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪವಿತ್ರ, ಆಶಾ, ಮಂಜುಳ ಇದ್ದರು.