ಮಡಿಕೇರಿ, ಮಾ. 31: ತಾರಿಕಟ್ಟೆ ಸಮೀಪದ ಕಾಫಿ ತೋಟದಲ್ಲಿ ಸುಳಿದಾಡುತ್ತಿರುವ ಒಂಟಿಸಲಗವನ್ನು ಸೆರೆ ಹಿಡಿಯಲು ಆದೇಶ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಹೇಳಿದರು.
ನೆಲ್ಲಿಕಾಡುವಿನಲ್ಲಿ ಕಾಡಾನೆ ಧಾಳಿಯಿಂದ ಬಲಿಯಾದ ಸಫಾನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ, ನಿಮಗೆ ಸೇರಬೇಕಾದ ಸರ್ಕಾರದ ಪರಿಹಾರ ನಿಮ್ಮ ಮನೆ ಬಾಗಿಲಿಗೆ ತಲಪಿಸುವ ಜವಾಬ್ದಾರಿ ತನ್ನದು ಎಂದು ಕುಟುಂಬಕ್ಕೆ ಭರವಸೆ ನೀಡಿದರು.
ಪರಿಹಾರದ ರೂ. 2 ಲಕ್ಷವನ್ನು ನಿಮ್ಮ ಕೈ ಸೇರಿಸಿದ್ದೇನೆ. ಬಾಕಿ ಉಳಿದಿರುವ ಮೊತ್ತವನ್ನು ಶೀಘ್ರದಲ್ಲಿ ಅಧಿಕಾರಿಗಳು ತಲಪಿಸುತ್ತಾರೆ. ಧಾಳಿ ಮಾಡಿದ ಒಂಟಿಸಲಗವನ್ನು ಹಿಡಿಯಲು ಈಗಾಗಲೇ ಆದೇಶ ನೀಡಲಾಗಿದೆ. ಕೆಲವೊಂದು ಇಲಾಖೆಗಳ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು ಆನೆ ಹಿಡಿಯುವ ಭರವಸೆ ನೀಡಿದರು.
ಈ ಸಂದರ್ಭ ತಾ.ಪಂ ಸದಸ್ಯೆ ಆಶಾ ಜೇಮ್ಸ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಎಂ.ಎಂ. ಪೊನ್ನಪ್ಪ, ಸರಿತಾ, ವಾಣಿ, ಅಬೂಬಕರ್ ಇದ್ದರು.