ವೀರಾಜಪೇಟೆ, ಮಾ.27: ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಟ್ರಸ್ಟ್ ವಿರಾಜಪೇಟೆ ಇವರ ವತಿಯಿಂದ ಶಾಲಾ ಬಾಲಕ ಬಾಲಕಿಯರಿಗೆ ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ತಾ. 30ರಿಂದ ಏಪ್ರಿಲ್ 23ರವರೆಗೆ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಹಾಕಿ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್‍ನ ಅದ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ತಿಳಿಸಿದ್ದಾರೆ.
23ನೇಯ ವರ್ಷದ ಹಾಕಿ ತರಬೇತಿ ಶಿಬಿರ ಇದಾಗಿದ್ದು, ರಾಜ್ಯಮಟ್ಟದ ತರಬೇತುದಾರರಿಂದ ಅಭ್ಯರ್ಥಿಗಳಿಗೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿ ರುವದಾಗಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯದರ್ಶಿ ಸಂಪಿ ಪೂಣಚ್ಚ ಮೊ.-9482246390 ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.