ಚೆಟ್ಟಳ್ಳಿ, ಮಾ. 25: ಮಡಿಕೇರಿಯಿಂದ ಅರ್ವತೊಕ್ಲುವಿಗೆ ಆಟೋದಲ್ಲಿ ತೆರಳಿದ ಅಸ್ಸಾಮಿ ಹುಡುಗರು ಆಟೋದಲ್ಲಿದ್ದ ತೆಂಗಿನಕಾಯಿಯನ್ನು ಎಗರಿಸಿದ ಘಟನೆ ನಡೆದಿದೆ.

(ಕೆಎ 12 ಬಿ 2573) ಆಟೋ ರಿಕ್ಷಾವನ್ನು ಹಿಂದಿ ಮಾತನಾಡುತ್ತಿದ್ದ ಸುಮಾರು 22 ರಿಂದ 23 ವಯಸ್ಸಿನ 3 ಜನ ಅಸ್ಸಾಮಿ ಹುಡುಗರು ರೂ. 170 ಒಪ್ಪಂದದ ಮೇರೆ ಮಡಿಕೇರಿಯಿಂದ ಅರ್ವತೊಕ್ಲುವಿಗೆ ತೆರಳಿದ್ದರು.

ಸಂತೆ ದಿನ ಮಡಿಕೇರಿ ಸಂತೆಯಿಂದ ಆಟೋ ಚಾಲಕ ಖರೀದಿಸಿದ್ದ ತೆಂಗಿನ ಕಾಯಿಗಳನ್ನು ತಮ್ಮ ಸಾಮಗ್ರಿಯೊಂದಿಗೆ ಬಾಡಿಗೆದಾರರು ಆಟೋ ಇಳಿಯುವಾಗ ಎಗರಿಸಿದ್ದರು. ಈ ಬಗ್ಗೆ ಎಚ್ಚೆತ್ತುಕೊಂಡ ಚಾಲಕ ನಾಣಯ್ಯ ಅಸ್ಸಾಮಿ ಹುಡುಗರನ್ನು ಗದರಿಸಿ ತೆಂಗಿನಕಾಯಿ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.