*ಗೋಣಿಕೊಪ್ಪಲು, ಮಾ. 25: ತಾ.ಪಂ. ಮಾಜಿ ಅಧ್ಯಕ್ಷೆ ಗ್ರಾ.ಪಂ. ನೌಕರನ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸಿ ಗ್ರಾ.ಪಂ. ನೌಕರರು ಹಾಗೂ ಕಾರ್ಮಿಕ ಸಂಘಟನೆ ಗೋಣಿಕೊಪ್ಪ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.

ಗ್ರಾ.ಪಂ. ನೌಕರ ಸುಬ್ರಮಣಿ ತಾ.ಪಂ. ಮಾಜಿ ಅಧ್ಯಕ್ಷೆ ರಾಣಿ ನಾರಾಯಣ್ ಅವರ ಅಂಗಡಿ ಮಳಿಗೆಯ ಬಾಡಿಗೆ ವಸೂಲಾತಿಗೆ ಹೋದ ಸಂದÀರ್ಭ ಬೈದು ಅಂಗಡಿಯಿಂದ ಹೊರಗಟ್ಟಿದರು. ನಂತರ ಪಂಚಾಯ್ತಿಗೆ ಬಂದ ರಾಣಿ ನಾರಾಯಣ ಕೊಡೆಯಿಂದ ನನ್ನನ್ನು ತಿಳಿಸಿದರು ಎಂದು ಸುಬ್ರಮಣಿ ಆರೋಪಿಸಿದ್ದಾರೆ.

ಈ ಸಂಬಂಧ ನ್ಯಾಯ ಒದಗಿಸಿಕೊಡಬೇಕೆಂದು ಕಾರ್ಮಿಕ ಸಂಘಟನೆ ಸಂಚಾಲಕ ಭರತ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕೆಲವು ಗಂಟೆಗಳ ಕಾಲ ಪ್ರತಿಭಟನೆ ನಿರತರಾದ ನೌಕರರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್ ಸಂಧಾನದೊಂದಿಗೆ ಪ್ರತಿಭಟನೆ ಹಿಂಪಡೆದರು.

ನನಗೆ ಅಶ್ಲೀಲ ಪದಗಳಿಂದ ನಿಂದಿಸಿ, ಸಾರ್ವಜನಿಕವಾಗಿ ಮಾನಹಾನಿ ಉಂಟುಮಾಡಿದ್ದರಿಂದ ಸುಬ್ರಮಣಿಯ ಮೇಲೆ ಈ ರೀತಿ ವರ್ತಿಸಿದ್ದೇನೆ. ಆದರೆ ಈ ವಿಚಾರವಾಗಿ ಈಗಾಗಲೇ ಪೊಲೀಸ್ ಠಾಣೆಯಲ್ಲಿ ರಾಜಿ ತೀರ್ಮಾನ ನಡೆಸಲಾಗಿದೆ. ಯಾವದೋ ಆಮಿಷದಿಂದ ಭರತ್ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ರಾಣಿ ನಾರಾಯಣ್ ಆರೋಪಿಸಿದ್ದಾರೆ.