ಮಡಿಕೇರಿ, ಮಾ. 24 : ಮಹಿಳೆಯರು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖಾ ವತಿಯಿಂದ ನಗರದ ಬಾಲಕರ ಬಾಲಮಂದಿರದ ಆವರಣದಲ್ಲಿ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ವಿಜುಸುಬ್ರಮಣಿ ಅವರು ಹತ್ತು ವಿಕಲಚೇತನರಿಗೆ ಲೋಹದ ಪೆಟ್ಟಿಗೆ ಅಂಗಡಿ ಹಾಗೂ ರೂ. 20 ಸಾವಿರ ಬಡ್ಡಿ ರಹಿತ ಸಾಲ ವಿತರಿಸಿದರು.

ಜಿ.ಪಂ. ಅಧ್ಯಕ್ಷ ಮಾತನಾಡಿ ಇಲಾಖೆಯಿಂದ ನೀಡುತ್ತಿರುವ ಲೋಹದ ಪೆಟ್ಟಿಗೆ ಅಂಗಡಿ ಹಾಗೂ ರೂ. 20 ಸಾವಿರ ಬಡ್ಡಿ ರಹಿತ ಸಾಲವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸಲಹೆ ಮಾಡಿದರು.

ಈ ಪೆಟ್ಟಿಗೆ ಅಂಗಡಿಗಳನ್ನು ಸೂಕ್ತ ಸ್ಥಳದಲ್ಲಿ ಇಡಲು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುಮತಿ ಕೊಡಲು ವ್ಯವಸ್ಥೆ ಮಾಡುವಂತೆ ವಿಲಕಚೇತನ ಅಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿ.ಪಂ.ಸದಸ್ಯರಾದ ಸಿ.ಕೆ.ಬೋಪಣ್ಣ, ಅಪ್ಪಂಡೇರಂಡ ಭವ್ಯ, ಅಚ್ಚಪಂಡ ಎಂ.ಮಹೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಮ್ತಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜಗದೀಶ್ ಎನ್.ಎಂ ಬಿ.ಪಿ.ದೇವರಾಜು, ಸಿಬ್ಬಂದಿ ವರ್ಗದವರು ಹಾಜರಿದ್ದರು.