ಮಡಿಕೇರಿ, ಮಾ. 24: ಗೋಣಿಕೊಪ್ಪಲಿನ ಶಾಲೆಯೊಂದಕ್ಕೆ ಸಂದಾಯವಾದ ಹಣದಲ್ಲಿ ಇಂದು ಐನೂರು ರೂಪಾಯಿಯ ಎರಡು ಖೋಟಾ ನೋಟು ಕಂಡು ಬಂದಿದೆ.

ಮಕ್ಕಳ ಓದಿಗೆ ಪೋಷಕರು ನೀಡುತ್ತಿರುವ ಶಾಲಾ ಶುಲ್ಕದಲ್ಲಿ ಈ ಹಣ ಸೇರಿದ್ದು, ಯಾರು ನೀಡಿರುವದೆಂದು ಪತ್ತೆಯಾಗಿಲ್ಲ. ಇಂದು ಒಟ್ಟು ಹಣವನ್ನು ಬ್ಯಾಂಕಿಗೆ ಸಂದಾಯ ಮಾಡುವಾಗ ಈ ನೋಟುಗಳು ಪತ್ತೆಯಾಗಿವೆ. ಎರಡೂ ನೋಟುಗಳ ಕ್ರಮ ಸಂಖ್ಯೆ 3ಉಒ 783983 ಎಂದಿದೆ. ಇವು ನಿಜವಾದ ನೋಟಿಗಿಂತ ಬಣ್ಣದಲ್ಲಿ ಸ್ವಲ್ಪ ಕುಂದಿದ್ದು, ಎರಡು ಹಾಳೆ ಅಂಟಿಸಿದಂತೆ ಕಾಣುತ್ತವೆ. ಖೋಟಾ ನೋಟಿನ ಕುರಿತು ಎಲ್ಲರೂ ಎಚ್ಚರ ವಹಿಸುವ ಅಗತ್ಯವಿದೆ.

- ಶಮಾ, ಗೋಣಿಕೊಪ್ಪ