ಗೋಣಿಕೊಪ್ಪಲು, ಮಾ. 24: ತಾಲೂಕು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಜಿಲ್ಲಾ ಮಟ್ಟದ ಒಕ್ಕಲಿಗರ ಕ್ರೀಡಾಕೂಟವನ್ನು ಏಪ್ರಿಲ್ 28 ರಿಂದ ಹಾತೂರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ನಡೆಯಲಿದೆ ಎಂದು ಒಕ್ಕಲಿಗರ ಯುವ ವೇದಿಕೆಯ ಕಾರ್ಯದರ್ಶಿ ಲೋಹಿತ್ ತಿಳಿಸಿದ್ದಾರೆ.

2ನೇ ವರ್ಷದ ಕ್ರೀಡಾಕೂಟ ಮೂರು ದಿನ ನಡೆಯಲಿದೆ. ಕ್ರೀಡಾಕೂಟದಲ್ಲಿ ಪುರುಷರಿಗೆ ಟೆನ್ನಿಸ್ ಬಾಲ್ ಕ್ರಿಕೆಟ್, ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಆಟೋಟ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋತೂರು, ಕೊಟ್ಟಗೇರಿ ಹಾಗೂ ಕಾನೂರು ವ್ಯಾಪ್ತಿಯ ವಕ್ಕಲಿಗರು ಕ್ರೀಡಾಕೂಟದ ಆತಿಥ್ಯ ವಹಿಸಿಕೊಂಡಿದ್ದಾರೆ. ಕಳೆದ ವರ್ಷ ಕ್ರಿಕೆಟ್ ಪಂದ್ಯಾಟ ಮಾತ್ರ ನಡೆದಿತ್ತು. ಸುಮಾರು 32 ತಂಡಗಳು ಪಾಲ್ಗೊಂಡಿದ್ದವು. ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಏಪ್ರಿಲ್ 25 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 9900878882, 9483598480 ಸಂಖೆಯಲ್ಲಿ ಸಂಪರ್ಕಿ ಸಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ ಎನ್ ಮಹೇಶ್, ಉಪಾಧ್ಯಕ್ಷ ಮಂಜುನಾಥ್, ಸದಸ್ಯರುಗಳಾದ ದಿನೇಶ್, ಪವನ್ ಇದ್ದರು.