*ಗೋಣಿಕೊಪ್ಪಲು, ಮಾ. 21: ತಾಲೂಕು ಬಿ.ಜೆ.ಪಿ. ಮಂಡಲ ವತಿಯಿಂದ ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್ ರಾಜ್ಯದ ಚುನಾವಣೆ ಯಲ್ಲಿ ಬಿ.ಜೆ.ಪಿ. ಗೆಲುವು ಸಾಧಿಸಿದಕ್ಕೆ ಪಟ್ಟಣದಲ್ಲಿ ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.

ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ದೇಶವು ಭ್ರಷ್ಟತೆಯಿಂದ ಮುಕ್ತಿ ಪಡೆದಿದೆ. ದೇಶದ ಅಭಿವೃದ್ಧಿ ದೃಷ್ಟಿಯಿಂದ ಬಿ.ಜೆ.ಪಿ. ಮೇಲೆ ಒಲವು ತೋರಿ ಜನತೆ ಮತ ನೀಡುವ ಮೂಲಕ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ ಎಂದು ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಅಭಿಪ್ರಾಯಪಟ್ಟರು.

ಮುಂದಿನ 2018ರ ಚುನಾವಣೆ ಯಲ್ಲಿ ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತಕ್ಕೆ ಬರಲಿದೆ ಎಂಬ ಶುಭ ಸೂಚನೆ ನೀಡುತ್ತಿದೆ ಎಂದು ಹೇಳಿದರು. ಜಿಲ್ಲಾ ವರ್ತಕ ಪ್ರಕೋಷ್ಠ ಸಂಚಾಲಕ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಮಹಿಳಾ ಮೋರ್ಚ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಉಪಾಧ್ಯಕ್ಷೆ ರಾಣಿ ನಾರಾಯಣ್, ಕಾರ್ಯದರ್ಶಿಗಳಾದ ರತಿ ಅಚ್ಚಪ್ಪ, ಸೀತಮ್ಮ, ಕೊಣಿಯಂಡ ಬೋಜಮ್ಮ, ನಗರ ಬಿ.ಜೆ.ಪಿ. ಅಧ್ಯಕ್ಷ ಗಾಂಧಿ ದೇವಯ್ಯ, ಅಲ್ಪ ಸಂಖ್ಯಾತರ ಯುವಮೋರ್ಚ ಅಧ್ಯಕ್ಷ ಹಕೀಂ, ಗ್ರಾ.ಪಂ. ಸದಸ್ಯರುಗಳಾದ ಸುರೇಶ್ ರೈ, ರಾಮಕೃಷ್ಣ ಭಟ್, ಪ್ರಮುಖರಾದ ರಾಜೇಶ್, ಸುರೇಶ್ ಹಾಜರಿದ್ದರು.