*ಗೋಣಿಕೊಪ್ಪಲು, ಮಾ. 21: ತಿತಿಮತಿ ಗ್ರಾ.ಪಂ. ಕಟ್ಟಡದ ದುರಸ್ತಿ ಕಾಮಗಾರಿಯಲ್ಲಿ ಯಾವದೇ ಅವ್ಯವಹಾರ ನಡೆದಿಲ್ಲ ಎಂದು ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಸ್ಪಷ್ಟನೆ ನೀಡಿದ್ದಾರೆ.’

ತಿತಿಮತಿ ಗ್ರಾ.ಪಂ. ಸಭಾಂಗಣ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಾಯಿತಿ ಅಧ್ಯಕ್ಷರ ದಕ್ಷತೆಯನ್ನು ಸಹಿಸದ ಕೆಲವು ಕಿಡಿಗೇಡಿಗಳು ಮಾಹಿತಿ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಪಂಚಾಯಿತಿಯ ಅಭಿವೃದ್ಧಿಯ ಬಗ್ಗೆ ಗಮನಹರಿಸದೆ ಪತ್ರಿಕೆಗಳಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ತಿತಿಮತಿ ಗ್ರಾ.ಪಂ. ಕಟ್ಟಡವನ್ನು ರಾಜೀವ್ ಗಾಂಧಿ ಸೇವಾ ಕೇಂದ್ರ ಯೋಜನೆಯ ಅನುದಾನದ 6 ಲಕ್ಷ ರೂ.ಗಳಲ್ಲಿ ದುರಸ್ತಿ ಮಾಡಬೇಕಾಗಿತ್ತು. ಇದಕ್ಕೆ ಇ-ಟೆಂಡರ್ ಮೂಲಕ ಪ್ರಕಟಣೆಯೂ ನೀಡಬೇಕಿತ್ತು. 6 ಲಕ್ಷ ರೂ.ಗಳ ಹಣ ದುರುಪಯೋಗ ಆಗಿದೆ ಎಂದು ಗ್ರಾ.ಪಂ. ಸದಸ್ಯ ವಿಜಯ ಆರೋಪಿಸುವದು ದಾಖಲೆಯಿಲ್ಲದ ಸುಳ್ಳು ಹೇಳಿಕೆಯಾಗಿದೆ ಎಂದು ಹೇಳಿದರು. 2016 ಜುಲೈ 27 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಕಾಮಗಾರಿ ಮತ್ತು ದುರಸ್ತಿ ಕಾರ್ಯ ಕೈಗೊಳ್ಳುವ ಬಗ್ಗೆ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಯಿತು. ಈ ಸಂದÀರ್ಭ ಸದಸ್ಯ ವಿಜಯ್ ಅವರು ಹಾಜರಿದ್ದು ಅನುಮೋದನೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.

ತಿತಿಮತಿ ಶಾಂತಿನಗರದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಳಪೆ ಗುಣಮಟ್ಟದಿಂದ ನಡೆದಿದೆ. 14ನೇ ಹಣಕಾಸು ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಕಮಲ ಅವರ ಮನೆಗೆ ಹೋಗುವ ರಸ್ತೆಗೆ 1.20 ಲಕ್ಷ ಅನುದಾನ ಕಾಮಗಾರಿಗೆ ಪಡೆದು ಕೊಂಡಿದ್ದು, ಇದನ್ನು ಪೂರ್ಣ ಕಳಪೆಯಿಂದ ನಿರ್ಮಿಸಲಾಗಿದೆ ಈ ಬಗ್ಗೆ ಪರಿಶೀಲಿಸಿ ಗುತ್ತಿಗೆದಾರನಿಗೆ ಹಣ ನೀಡುವದಾಗಿ ಗ್ರಾ.ಪಂ. ಅಧ್ಯಕ್ಷ ಶಿವಕುಮಾರ್ ಹೇಳಿದರು.

6 ಲಕ್ಷ ಅನುದಾನದಲ್ಲೂ ದುರ್ಬಳಕೆಯಾಗಿದೆ ಎಂದು ಹೇಳುತ್ತಿರುವ ಸದಸ್ಯ ವಿಜಯ ದಾಖಲೆ ಸಹಿತ ಸಾಬೀತುಪಡಿಸಲಿ. ಪೂರ್ಣ ತನಿಖೆಗೆ ತಾನು ಬದ್ಧನಾಗಿದ್ದೇನೆ. ವಿಜಯ್ ಬುಡಕಟ್ಟು ಜನರಿಗೆ ಹಕ್ಕು ಪತ್ರ ನೀಡುವ ಭರವಸೆ ನೀಡಿ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿ.ಪಂ. ಅನುದಾನದ 35 ಲಕ್ಷದಲ್ಲಿ ತಿತಿಮತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಡೆಸಿ ಅಭಿವೃದ್ಧಿ ಪಡಿಸಲಾಗಿದೆ. ಜಂಗಲ್ ಹಾಡಿ, ಆಯಿರಸುಳಿ, ಚೀಣಿಹಡ್ಲು ಹಾಡಿಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿ ಬಯಲು ಮುಕ್ತ ಶೌಚಾಲಯ ಎಂಬ ಹೆಗ್ಗಳಿಕೆಗೂ ಕಾರಣವಾಗಿದೆ ಎಂದು ಹೇಳಿದರು.

ಈ ಸಂದÀರ್ಭ ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಗ್ರಾ.ಪಂ. ಸದಸ್ಯರುಗಳಾದ ಶಾಂತಮ್ಮ, ಪೊನ್ನು ಉಪಸ್ಥಿತರಿದ್ದರು.