ಗೋಣಿಕೊಪ್ಪಲು, ಮಾ. 21: ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪದ ಮೇರೆ ಶ್ರೀಮಂಗಲ ಪೊಲೀಸರು ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ. ತಿತಿಮತಿಯ ಚಿಪ್ಪ ಹಾಗೂ ರಂಗ ಎಂಬವರೇ ಬಂಧಿತ ಆರೋಪಿಗಳು.

ಬಿರುನಾಣಿಯ ಗುಡ್ಡಮಾಡ ಪ್ರವೀಣ್ ಎಂಬವರ ಲೈನ್ ಮನೆಯಲ್ಲಿ ವಾಸವಿರುವ ಯರವರ ಕುಟುಂಬವನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಲೈನ್‍ಮನೆಗೆ ತೆರಳಿದ್ದರು.

ಅಲ್ಲಿನ ಪೆರಿಯ ಸ್ವಾಮಿ ಎಂಬವರ ಮಗು ಅನಾರೋಗ್ಯದಿಂದ ಇರುವದನ್ನು ಗಮನಿಸಿ ಮತಾಂತರ ಮಾಡಿದರೆ ರೋಗ ಗುಣಪಡಿಸುವ ಆಮಿಷ ಒಡ್ಡಿದ್ದರು. ಇದಲ್ಲದೆ ಮನೆಯ ಮಾಲೀಕರಿಗೂ ಮಧುಮೇಹವಿದ್ದು, ಗುಣಪಡಿಸಲು ಕ್ರಿಶ್ಚಿಯನ್ ಧರ್ಮಕ್ಕೆ ಸೇರುವಂತೆ ಒತ್ತಾಯ ಮಾಡಿದ್ದರು ಎಂದು ಪ್ರವೀಣ್ ಪೊಲೀಸರಿಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.