ಮಡಿಕೇರಿ, ಮಾ. 21 : ನಗರದ ಪÀÅಟಾಣಿ ನಗರ ಬಡಾವಣೆÉಯ ಪೈಸಾರಿ ಜಾಗದಲ್ಲಿ ವಾಸವಿದ್ದ ಪರಿಶಿಷ್ಟ ವ್ಯಕ್ತಿಯೊಬ್ಬರ ಮೇಲೆ ಮೇಲ್ವರ್ಗದ ಮಂದಿ ಹಲ್ಲೆ ನಡೆಸಿ, ಮನೆಯನ್ನು ಕೆಡವಿರುವ ಅಮಾನವೀಯ ಘÀಟನೆ ನಡೆದಿದೆ ಎಂದು ಆರೋಪಿಸಿರುವ ದಲಿತ ಸಂಘರ್ಷ ಸಮಿತಿ, ಈ ಬಗ್ಗೆ ವಾರದ ಒಳಗಾಗಿ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ವಿಭಾಗೀಯ ಸಂಚಾಲಕ ಕೃಷ್ಣಪ್ಪ ನಗರದ ಪುಟಾಣಿ ನಗರದಲ್ಲಿ ಒಂದೂವರೆ ಸೆಂಟ್ ಪೈಸಾರಿ ಜಾಗದಲ್ಲಿ ಒಂದೂವರೆ ದಶಕದಿಂದ ಸ್ವಾಮಿ ಎಂಬವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ವಾಸವಿದ್ದಾರೆ. ಇವರ ಮೇಲೆ ವಾರದ ಹಿಂದೆ ಮೇಲ್ವ ರ್ಗದ ಮಂದಿ ಹಲ್ಲೆ ನಡೆಸಿರುವದಲ್ಲದೆ, ಅವರ ಮನೆಯನ್ನು ಕೆಡವಿ ಅಮಾನ ವೀಯವಾಗಿ ನಡೆದು ಕೊಂಡಿದ್ದಾರೆ ಎಂದು ಆರೋಪಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದರೂ, ಆರೋಪಿಗಳು ನಿರಾತಂಕವಾಗಿ ಓಡಾಡುತ್ತಿದ್ದಾರೆ. ಆದಷ್ಟು ಶೀಘ್ರ ಜಿಲ್ಲಾಡಳಿತ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವದರೊಂದಿಗೆ ಮನೆಯನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿ ದರು.

ಸಂಘಟನೆಯ ಪ್ರಮುಖ ಪಿ.ಎಸ್. ಮುತ್ತ, ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಹೆಚ್.ಬಿ.ಸತೀಶ್, ತಂಗಚ್ಚನ್, ಸುಶೀಲ ಹಾಗೂ ಸಾವಿತ್ರಿ ಉಪಸ್ಥಿತರಿದ್ದರು.