24 ಮಂದಿ ಭಾರÀತೀಯ ಮೀನುಗಾರರ ಬಂಧನ

ರಾಮೇಶ್ವರಂ, ಮಾ. 5: ಅಂತರರಾಷ್ಟ್ರೀಯ ಕಡಲ ಗಡಿರೇಖೆಯನ್ನು ದಾಟಿ ಹೋಗಿ ಶ್ರೀಲಂಕಾ ದ್ವೀಪ ರಾಷ್ಟ್ರದ ಪ್ರದೇಶದ ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ 24 ಮಂದಿ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಭಾನುವಾರ ಬಂಧಿಸಿದೆ. ಶ್ರೀಲಂಕಾದ ಕಚತಿವು ಮತ್ತು ತಲೈಮನ್ನಾರ್ ಮಧ್ಯೆ ಮೀನುಗಾರಿಕೆ ಮಾಡುತ್ತಿದ್ದ 15 ಮೀನುಗಾರರನ್ನು ಬಂಧಿಸಿ ತಲೈಮನ್ನಾರ್‍ಗೆ ಕರೆದೊಯ್ಯಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕುಲಂಜಿನಾಥನ್ ತಿಳಿಸಿದ್ದಾರೆ. ನೆಡುಂತೀವು ಹತ್ತಿರ ಮೀನುಗಾರಿಕೆ ನಡೆಸುತ್ತಿದ್ದ ಇತರ 9 ಮಂದಿಯನ್ನು ಬಂಧಿಸಿ ಕಂಗಸಂತುರೈಗೆ ಕರೆದೊಯ್ಯಲಾಯಿತು. ಮೀನುಗಾರರ ಬಳಿಯಿಂದ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎನ್‍ಕೌಂಟರ್‍ಗೆ ಇಬ್ಬರು ಉಗ್ರರು ಬಲಿ

ಜಮ್ಮು, ಮಾ. 5: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ತ್ರಾಲ್’ನಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ನಡೆಸಿದ್ದು, ಇಬ್ಬರು ಉಗ್ರರನ್ನು ಹತ್ಯೆ ಮಾಡಿರುವದಾಗಿ ತಿಳಿದುಬಂದಿದೆ. ದಕ್ಷಿಣ ಕಾಶ್ಮೀರದ ಪುಲ್ಮಾಮ ಜಿಲ್ಲೆಯ ತ್ರಾಲ್ ಎಂಬ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದರು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಉಗ್ರರ ಅಡಗಿಕುಳಿತ್ತಿರುವ ಬಗ್ಗೆ ಗುಪ್ತಚರ ಇಲಾಖೆ ಸೇನಾ ಪಡೆಗೆ ಮಾಹಿತಿ ನೀಡಿದೆ. ಕೂಡಲೇ ಸಿದ್ಧರಾದ ಯೋಧರು ಕಾರ್ಯಾಚರಣೆ ನಡೆಸಲು ಮುಂದಾಗಿದ್ದರು. ಸೇನಾ ಪಡೆ ಕಾರ್ಯಾಚರಣೆಗಿಳಿಯುತ್ತಿದ್ದಂತೆಯೇ ಕೆಲ ಸ್ಥಳೀಯರು ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸಿದ್ದಾರೆ. ಸೇನಾ ಪಡೆಗಳ ಮೇಲೆ ಕೆಲವರು ಕಲ್ಲು ತೂರಾಟವನ್ನು ನಡೆಸಿದ್ದಾರೆ. ನಂತರ ಸ್ಥಳದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಸ್ಥಳೀಯ ಅಧಿಕಾರಿಗಳು ಸೆಕ್ಷನ್ 147 ಜಾರಿ ಮಾಡಿದ್ದರು. ಇದರಂತೆ ನಿಷೇಧಿತ ಸ್ಥಳದಲ್ಲಿ ನಾಲ್ಕರಿಂದ ಹೆಚ್ಚು ಜನರು ಗುಂಪು ಕಟ್ಟಿಹೋಗದಂತೆ ಸೂಚನೆ ನೀಡಲಾಯಿತು.

ಸೇನಾ ಶಿಬಿರ ಸ್ಫೋಟದಲ್ಲಿ ಮೂವರಿಗೆ ಗಾಯ

ಶ್ರೀನಗರ, ಮಾ. 5: ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೆÇೀರ್ ಸೇನಾ ಶಿಬಿರದಲ್ಲಿ ಸ್ಫೋಟ ಸಂಭವಿಸಿದ್ದು, ಘÀಟನೆಯಲ್ಲಿ ಮೂವರು ನಾಗರಿಕರಿಗೆ ಗಾಯವಾಗಿರುವ ಘಟನೆ ಭಾನುವಾರ ನಡೆದಿದೆ. ಸೋಪೆÇೀರ್’ನ ಪಝಲ್ಪೊರ ಹರ್ದ್’ಶಿವಾ ಗ್ರಾಮದಲ್ಲಿರುವ ಸೇನಾ ಶಿಬಿರದಲ್ಲಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಮೂವರ ಪೈಕಿ ಓರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟಕ್ಕೆ ಪ್ರಮುಖ ಕಾರಣಗಳು ಈವರೆಗೂ ತಿಳಿದುಬಂದಿಲ್ಲ. ಯಾವದೇ ಉಗ್ರ ಸಂಘಟನೆಗಳೂ ಈವರೆಗೂ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ. ಕಾಶ್ಮೀರದ ತ್ರಾಲ್ ಎಂಬ ಪ್ರದೇಶದಲ್ಲಿ ಭಾರತೀಯ ಸೇನೆ ಎನ್‍ಕೌಂಟರ್ ನಡೆಸಿ, ಇಬ್ಬರು ಉಗ್ರನ್ನು ಹತ್ಯೆ ಮಾಡಿತು.

ಶಿವಸೇನೆಗೆ ಮೇಯರ್-ಉಪ ಮೇಯರ್ ಸ್ಥಾನ

ಮುಂಬಯಿ, ಮಾ. 5: ಬೃಹತ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವದಿಲ್ಲ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಘೋಷಿಸಿದ ನಂತರ ಶಿವಸೇನೆ ತನ್ನ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ವಿಶ್ವನಾಥ್ ಮಹದೇಶ್ವರ್ ಮೇಯರ್ ಅಭ್ಯರ್ಥಿ ಹಾಗೂ ಹರೇಶ್ವರ್ ವರ್ಲಿಕರ್ ಅವರ ಹೆಸರನ್ನು ಉಪ ಮೇಯರ್ ಪಟ್ಟಕ್ಕೆ ಶಿವಸೇನೆ ಸೂಚಿಸಿದೆ. ಎಂಸಿ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸುವದಿಲ್ಲ. ಆದರೆ ನಮ್ಮ ಕಾಪೆರ್Çೀರೇಟರ್‍ಗಳು ಬಿಎಂಸಿಯಲ್ಲಿ ಪಾರದರ್ಶಕತೆಯನ್ನು ಗಮನಿಸುತ್ತಾರೆ ಎಂದು ಫಡ್ನವಿಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದುವರೆದ ಆರ್‍ಎಸ್‍ಎಸ್-ಸಿಪಿಐಎಂ ಘರ್ಷಣೆ

ಕೋಯಿಕೋಡ್, ಮಾ. 5: ಕೇರಳ ರಾಜ್ಯದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ಕಮ್ಯುನಿಸ್ಟ್ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಭಾನುವಾರ ನಡೆದಿದೆ. ಸಿಪಿಐ(ಎಂ) ಕಾರ್ಯಕರ್ತರು ಹಾಗೂ ಆರ್‍ಎಸ್‍ಎಸ್, ಬಿಜೆಪಿ ಕಾರ್ಯಕರ್ತರ ನಡುವೆ ಕೇರಳದ ಕೋಝಿಕ್ಕೋಡ್ ನಲ್ಲಿ ಘರ್ಷಣೆ ಏರ್ಪಟ್ಟಿದ್ದು, ಘರ್ಷಣೆಯಲ್ಲಿ ಮೂವರು ಆರ್‍ಎಸ್‍ಎಸ್ ಕಾರ್ಯಕರ್ತರು ಹಾಗೂ ಓರ್ವ ಬಿಜೆಪಿ ಕಾರ್ಯಕರ್ತ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದಷ್ಟೇ ಆರ್‍ಎಸ್‍ಎಸ್ ನಾಯಕರೊಬ್ಬರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದವರಿಗೆ ರೂ. 1 ಕೋಟಿ ಬಹುಮಾನ ನೀಡುವದಾಗಿ ಘೋಷಣೆ ಮಾಡಿದ್ದರು. ಈ ಹೇಳಿಕೆ ಕೇರಳದಲ್ಲಿ ಸಾಕಷ್ಟು ಪ್ರಕ್ಷುಬ್ಧ ವಾತಾವರಣನ್ನು ನಿರ್ಮಾಣ ಮಾಡಿತ್ತು. ಆರ್‍ಎಸ್‍ಎಸ್ ಕಚೇರಿ ಮೇಲೆ ಬಾಂಬ್ ಧಾಳಿ ನಡೆಸಲಾಗಿತ್ತು.

1,400 ಸಾರಾಯಿ ಅಂಗಡಿಗಳು ಏ. 1 ರಿಂದ ಬಂದ್

ಚಂಡಿಗಡ, ಮಾ. 5: ಪಂಜಾಬ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸುಮಾರು 1,400 ಸಾರಾಯಿ ಅಂಗಡಿಗಳು ಏ. 1 ರಿಂದ ಬಂದ್ ಆಗಲಿವೆ. ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ ಈ ಸಾರಾಯಿ ಅಂಗಡಿಗಳನ್ನು ಮುಚ್ಚಲಾಗುತ್ತಿದೆ. ಅಬಕಾರಿ ವಲಯದಿಂದಲೇ ಪಂಜಾಬ್‍ಗೆ ಹೆಚ್ಚಿನ ವರಮಾನ ಬರುತ್ತಿತ್ತು. ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿ 500 ಮೀಟರ್ ಒಳಗೆ ಯಾವದೇ ಮದ್ಯದಂಗಡಿ ಇರಕೂಡದೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿಲ್ಲ, ಬದಲಿಗೆ ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಸುಪ್ರೀಂ ಆದೇಶ ಕೇವಲ ಮದ್ಯದಂಗಡಿಗಳಿಗೆ ಮಾತ್ರ, ಹೀಗಾಗಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ನಿಟ್ಟುಸಿರುಬಿಟ್ಟಿದ್ದಾರೆ.

ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಹದ್ದಿನ ಕಣ್ಣು

ಬೆಂಗಳೂರು, ಮಾ. 5: ತಾ. 9 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಅಗತ್ಯ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ವರ್ಷದಂತೆ ಈ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಕಚೇರಿಯಲ್ಲಿ &divound;ಗಾ ಕೊಠಡಿಯನ್ನು ಸ್ಥಾಪಿಸಿ ರಾಜ್ಯಾದ್ಯಂತ ಪ್ರಶ್ನೆ ಪತ್ರಿಕೆ ಸಂಗ್ರಹವಾಗಿರುವಲ್ಲಿ ಖಜಾನೆಯ ಮೇಲ್ವಿಚಾರಣೆ ನಡೆಸಲಿದೆ. &divound;ಯಂತ್ರಣ ಕೊಠಡಿಯನ್ನು ಪರೀಕ್ಷಾ ವಿಭಾಗದ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಖಜಾನೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು &divound;ಯೋಜಿಸಲಾಗಿದೆ. ಪ್ರಶ್ನೆಪತ್ರಿಕೆ ಇಟ್ಟಿರುವ ಕೊಠಡಿಗೆ ಯಾರಾದರೂ ಅನಧಿಕೃತ ವ್ಯಕ್ತಿಗಳು ಪ್ರವೇಶಿಸಿದರೆ ಪದವಿಪೂರ್ವ ವಿಭಾಗದ &divound;ರ್ದೇಶಕರ ಮೊಬೈಲ್ ಫೆÇೀನ್‍ಗೆ ಎಚ್ಚರಿಕೆ ಕರೆ ಹೋಗುತ್ತದೆ. ಅಲ್ಲದೆ ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ &divound;ೀಡಲು ಖಜಾನೆ ಕೊಠಡಿಯಲ್ಲಿ ಅಲರಾಂ ಶಬ್ದ ಮಾಡುತ್ತದೆ. ಪರೀಕ್ಷೆ ಆರಂಭವಾಗುವದಕ್ಕೆ ಮೂರು ದಿನಗಳ ಮೊದಲು ಪ್ರಶ್ನೆ ಪತ್ರಿಕೆಯನ್ನು ಜಿಲ್ಲಾ ಖಜಾನೆಯಲ್ಲಿ ಶೇಖರಿಸಲಾಗುತ್ತದೆ. ಅಲ್ಲಿಂದ ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ದಿನ ಪರೀಕ್ಷಾ ಕೇಂದ್ರಗಳಿಗೆ ವಿತರಿಸಲಾಗುತ್ತದೆ.