ಮಡಿಕೇರಿ, ಮಾ.5: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ 6ನೇ ಕಾರ್ಮೆಲ್ ಕಪ್ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ನಗರದ ಮರ್ಕರ ಟೆಕ್ವಾಂಡೊ ಕ್ಲಬ್‍ಗೆ ಉತ್ತಮ ತಂಡ ಪ್ರಶಸ್ತಿ ಲಭಿಸಿದ್ದು, 20 ವಿದ್ಯಾರ್ಥಿಗಳು ಪದಕ ಗಳಿಸಿದ್ದಾರೆ.

ಕ್ಲಬ್‍ನ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರುವ ಮೂಲಕ 12 ಚಿನ್ನ, 17 ಬೆಳ್ಳಿ ಹಾಗೂ 21 ಕಂಚಿನ ಪದಕಗಳನ್ನು ಗಳಿಸಿದ್ದಾರೆ. ಅರ್ಸಲಾನ್, ಚೇತನಾಶ್ರೀ, ಮಾನ್ವಿಕ್ ಮೌರ್ಯ, ಎನ್.ಕೆ. ಪ್ರಜ್ಞಾ, ಎಂ.ಆರ್. ಮೃದುಲ್, ಜೀಷನ್, ಧೃವ ದೇವಯ್ಯ, ಬಿ.ಆರ್. ಯಜ್ಞ, ಎನ್.ಎನ್. ನಿರುತ್, ಜಿ.ಹೆಚ್. ಮೋಕ್ಷಿತ್, ಹೊನ್ನತ್ತಿ ಕಾವೇರಮ್ಮ, ಸೋನಾಲ್ ಸೀತಮ್ಮ, ಯು.ಡಿ. ಮೋನಿಷ್, ಜಿ.ಕೆ. ರೋಷನ್, ಶ್ರೇಯಸ್ ಸೋಮಣ್ಣ, ನಿಕೇಶ್, ಶ್ರೇಯಸ್ ವೆಂಕಟಾದ್ರಿ, ನಮನ್ ಬೆಳ್ಳಿಯಪ್ಪ್ಪ, ಭೂಷಿತ ಬೆಳ್ಯಪ್ಪ ಹಾಗೂ ಮಿಸಾಜóಲ್ ಪದಕಗಳನ್ನು ಗೆದ್ದ ವಿದ್ಯಾರ್ಥಿಗಳಾಗಿದ್ದಾರೆ.

ಕ್ಲಬ್‍ನ ತರಬೇತುದಾರ ಕುಶಾಲ್ ಕುಮಾರ್ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯನ್ನು ಎದುರಿಸಿದ್ದರು.