ನಾಪೆÇೀಕ್ಲು, ಮಾ. 3: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಮಸೀದಿಯಲ್ಲಿ ನಮಾಜಿನ ನಂತರ ಸೂಫಿ ಶಯ್ಯದ್ ದರ್ಗಾ ಶರೀಫ್‍ನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು ನಂತರ ಹಳ್ರಮಿ ತಂಙಳ್ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿ ಧ್ವಜಾರೋಹಣದೊಂದಿಗೆ ಬಹು: ಬಲಿಯತ್ಕಾರಂಡ ಉಸ್ಮಾನ್ ಹಾಜಿ ಉರೂಸ್‍ಗೆ ಚಾಲನೆ ನೀಡಿದರು,ಈ ಸಂದರ್ಭ ಹುಸೈನ್ ಸಖಾಫಿ, ಬಹು: ಝಿಯಾಉಲ್ ಮುಸ್ತಫ ಸಯ್ಯಿದ್ ಹಾಮಿದ್ ಕೋಯಮ್ಮ ತಂಙಳ್ ಮಾಟೂರ್, ಮಹಮ್ಮದ್ ಸಯ್ಯಿದ್ ಸಾಲಿಂ ಸಖಾಫಿ ಅಲ್ ಬುಖಾರಿ, ಹಾಫಿಳ್ ಇಸ್ಮಾಯಿಲ್ ಲತ್ತೀಫಿ, ಸಯ್ಯದ್ ಕೊಯಮ್ಮ ತಂಙಳ್, ಸಯ್ಯದ್ ಪಕೋಯ ತಂಙಳ್, ಕಾಳೇರ ಅಬ್ದುಲ್ ಖಾದರ್ ಹಾಜಿ, ಬಿ.ಎಂ.ಆಲಿ ಹಾಜಿ, ಉಮ್ಮರ್ ಮುಸ್ಲಿಯಾರ್, ಚೆಂಬಾರಂಡ ಸಾದಲಿ ಹಾಜಿ, ಮೂಸ ಹಾಜಿ, ಚಕ್ಕೇರ ಮೂಸ, ಹಂಸ ಮುಸ್ಲಿಯಾರ್, ಚೆಂಬಾರಂಡ ಹಸೈನಾರ್ ಹಾಜಿ, ವಕ್ಫ್ ಬೋರ್ಡ್ ಅಧ್ಯಕ್ಷ

(ಮೊದಲ ಪುಟದಿಂದ) ಅಬ್ದುಲ್ ರಹಿಮಾನ್ ಮತ್ತಿತರ ಗಣ್ಯರು, ಭಕ್ತಾಧಿಗಳು, ನಾಗರಿಕರು ಇದ್ದರು. ಡಿವೈಎಸ್ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಬಸ್ ವ್ಯವಸ್ಥೆ : ಕೊಡಗಿನ ಪ್ರಖ್ಯಾತ ಧಾರ್ಮಿಕ ಕೇಂದ್ರ ಎಮ್ಮೆಮಾಡು ಗ್ರಾಮಕ್ಕೆ ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮದಿಂದ ನೂತನ ಬಸ್ ಸಂಚಾರಕ್ಕೆ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹಿಮಾನ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೆಯಂಡ ಸಾಬ ತಿಮ್ಮಯ್ಯ ಮತ್ತು ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಎಂ.ಎ. ಶೌಕತ್ ಆಲಿ ಅವರು ನಾಪೆÇೀಕ್ಲು ನಗರದಲ್ಲಿ ಚಾಲನೆ ನೀಡಿದರು.

ನಂತರ ಮಾತನಾಡಿದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕ ಎಂ.ಎ. ಶೌಕತ್ ಆಲಿಯವರು ಭಕ್ತರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದರು. ಈ ಬಸ್ ಬೆಳಿಗ್ಗೆ 9 ಗಂಟೆಗೆ ನಾಪೆÇೀಕ್ಲುವಿನಿಂದ ಎಮ್ಮೆಮಾಡಿಗೆ ಹೊರಡುತ್ತದೆ ಹಾಗೆಯೇ ಮಧ್ಯಾಹ್ನ 1 ಗಂಟೆಗೆ ಮತ್ತು ಸಾಯಂಕಾಲ 4 ಗಂಟೆಗೆ ಸಂಚರಿಸಲಿದೆ ಎಂದು ತಿಳಿಸಿದರು. ಈ ಸಂದರ್ಭ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಸದಸ್ಯರಾದ ಮಹಮ್ಮದ್ ಖುರೇಶಿ, ಎ.ಕೆ. ಹ್ಯಾರಿಸ್, ಪಿ.ಎಂ. ಅಜೀಜ್, ರೋಷನ್, ಕುಶು ಕುಶಾಲಪ್ಪ, ಅರೆಯಡ ಸೋಮಪ್ಪ, ಕಲಿಯಂಡ ಹ್ಯಾರಿ ಮಂದಣ್ಣ, ಕೊಂಡಿರ ಗಣೇಶ್ ನಾಣಯ್ಯ, ಬಿದ್ದಾಟಂಡ ಬಬ್ಬÀು, ಅಹಮ್ಮದ್ ಮತ್ತಿತರರು ಇದ್ದರು.