ಮಡಿಕೇರಿ, ನ. 24: ಸಿಎನ್‍ಸಿ ವತಿಯಿಂದ ಕೊಡವ ನ್ಯಾಷನಲ್ ಡೇ ಅಂಗವಾಗಿ ಗಾಂಧಿ ಮೈದಾನದಲ್ಲಿ ಮೊದಲಿಗೆ ಗುರುಕಾರೋಣರಿಗೆ, ದೇವಟ್ ಪರಂಬು ನರಮೇಧದಲ್ಲಿ ಸಾವನ್ನಪ್ಪಿದವರಿಗೆ ಸಾಮೂಹಿಕವಾಗಿ ‘ಮೀದಿ’ ಇಡಲಾಯಿತು. ಬಳಿಕ ಸಿಎನ್‍ಸಿ ಅಧ್ಯಕ್ಷ ನಾಚಪ್ಪ ಸಿಎನ್‍ಸಿಯ ಧ್ವಜಾರೋಹಣ ಮಾಡಿದರು.

ಈ ಸಂದರ್ಭ ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಬಳಿಕ ದುಡಿಕೊಟ್ಟ್ ಪಾಟ್‍ನೊಂದಿಗೆ ಮೆರವಣಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ತಳಿಯತಕ್ಕಿ ಬೊಳಕ್, ಕೊಡವ - ಕೊಡವತಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಬಳಿಕ ಸಾಂಪ್ರದಾಯದಂತೆ ನಾಚಪ್ಪ ಬಾಳೆ ಕಡಿದು ಸಮಾವೇಶಕ್ಕೆ ಚಾಲನೆ ನೀಡಿದರು. ಮುಕ್ಕೋಡ್ಲಿನ ವ್ಯಾಲಿಡ್ಯೂ ತಂಡದಿಂದ ಬೊಳಕಾಟ್, ಕತ್ತಿಯಾಟ್ ಪ್ರದರ್ಶಿಸಿತ್ತು. ಸಮಾವೇಶದ ಬಳಿಕ ಸಾಂಪ್ರದಾಯಿಕ ಭೋಜನ ನಡೆಯಿತು.