ಮಡಿಕೇರಿ, ಜೂ. 18: ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ 2016-17ನೇ ಸಾಲಿನಲ್ಲಿ ಮುಖ್ಯಮಂತ್ರಿಯವರ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2001 ರ ಜನಗಣತಿಯಲ್ಲಿ 20 ಸಾವಿರ ಜನರಿಗಿಂತ ಕಡಿಮೆ ಇರುವ ಪಟ್ಟಣ ವೆಂದು ವರ್ಗೀಕರಿಸಿರುವ ಪ್ರದೇಶದಲ್ಲಿನ ಅಭ್ಯರ್ಥಿಗಳು ಅರ್ಹರಿರುತ್ತಾರೆ. ಕನಿಷ್ಟ 21 ವರ್ಷ ಹಾಗೂ ಗರಿಷ್ಠ 35 ವರ್ಷ ಸಾಮಾನ್ಯ ವರ್ಗದವರಿಗೆ ಹಾಗೂ ಗರಿಷ್ಠ 45 ವರ್ಷ ವಿಶೇಷ ವರ್ಗದವರಿಗೆ. (ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಾಜಿ ಯೋಧರು, ಅಂಗವಿಕಲರು). ಕನಿಷ್ಟ 8ನೇ ತರಗತಿ ಉತ್ತೀರ್ಣರಾಗಿರಬೇಕು. ಯಾವದೇ ಆದಾಯದ ಮಿತಿ ಇರುವದಿಲ್ಲ.

ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಮಾತ್ರ ಪ್ರತಿ ಘಟಕಕ್ಕೆ ಗರಿಷ್ಠ ರೂ. 10 ಲಕ್ಷ ಯೋಜನಾ ವೆಚ್ಚದ ಕಿರು ಉತ್ಪಾದನಾ ಘಟಕಗಳನ್ನು ಹಾಗೂ ಸೇವಾ ಉದ್ಯಮಗಳನ್ನು ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಒದಗಿಸಲಾಗುವದು. ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಸಾಮಾನ್ಯ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ. 25 ರಷ್ಟು ಹಾಗೂ ವಿಶೇಷ ವರ್ಗದ ಉದ್ಯಮಶೀಲರಿಗೆ ಯೋಜನಾ ವೆಚ್ಚದ ಶೇ. 35 ರಷ್ಟು ಸಹಾಯಧನ ಮಂಜೂರು ಮಾಡಲಾಗುವದು.

ಅರ್ಹ ಅಭ್ಯರ್ಥಿಗಳು ತಿತಿತಿ. ಛಿmegಠಿ.ಞಚಿಡಿ.ಟಿiಛಿ.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ ದೂ.ಸಂ.08272-228431 ಇವರನ್ನು ಸಂಪರ್ಕಿಸ ಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.