ಮಡಿಕೇರಿ, ಅ. 9: ಕಳೆದ ಕೆಲವು ವರ್ಷಗಳಿಂದ ಪ್ರಾರಂಭ ಗೊಂಡಿರುವ ಯುವ ದಸರಾ ಮಂಜಿನ ನಗರಿ ಮಡಿಕೇರಿಯ ದಸರಾದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ವರ್ಷಂಪ್ರತಿ ಯುವ ದಸರಾಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ನಿನ್ನೆ ಸಂಜೆ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಯುವ ದಸರಾ ಅಂಗವಾಗಿ ಸಾಂಸ್ಕøತಿಕ ಸಮಿತಿಯಿಂದ ನಡೆದ ವಿವಿಧ ತಂಡಗಳ ರೋಚಕ ನೃತ್ಯ ಸ್ಪರ್ಧೆ, ಪ್ರದರ್ಶನ, ಡಿಜೆಗೆ ಯುವ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸಿತು. ಇತ್ತೀಚೆಗೆ ಜನಪ್ರಿಯ ವಾಗುತ್ತಿರುವ ಚುಟುಕು ಕ್ರಿಕೆಟ್ (ಟ್ವಿಂಟಿ-20) ಮಾದರಿಯಲ್ಲಿ ಇಲ್ಲಿ ಎಲ್ಲವೂ ಬಿರುಸು...

ಅಬ್ಬರದ ಸಂಗೀತ ರೋಮಾಂಚಕಾರಿಯಾದ ನೃತ್ಯದ ಪ್ರದರ್ಶನ, ಮೋಹಕ ನಿರೂಪಣೆ, ಬೆಳಕಿನ ಚಿತ್ತಾರ, ಡಿಜೆಯ ಮಾರ್ದನಿಗೆ ಚಪ್ಪಾಳೆ, ಕೇಕೆ, ಶಿಳ್ಳೆಯ ಶಬ್ಧದೊಂದಿಗೆ ನಡುರಾತ್ರಿ ಕಳೆಯುವ ತನಕವೂ ಗಾಂಧಿ ಮೈದಾನದಲ್ಲಿದ್ದ ಜನಸಾಗರ ಕಡಿಮೆಯಾಗಲಿಲ್ಲ.