ಮಡಿಕೇರಿ, ಆ. 21: ಪ್ರತಿಷ್ಠಿತ ಮಡಿಕೇರಿ ಕೊಡವ ಸಮಾಜದ ನೂತನ ಆಡಳಿತ ಮಂಡಳಿಗೆ ತೀವ್ರÀ ಕುತೂಹಲಭರಿತವಾಗಿ ಇಂದು ಚುನಾವಣೆ ನಡೆದಿದ್ದು, ಮುಂದಿನ ಸಾಲಿನ ಅಧ್ಯಕ್ಷರಾಗಿ ಕೊಂಗಂಡ ಎಸ್. ದೇವಯ್ಯ (ಜಯ) ಅವರು ಚುನಾಯಿತರಾಗಿದ್ದಾರೆ.

ಸಮಾಜದ ಹಾಲಿ ಅಧ್ಯಕ್ಷ ಮೂವೇರ ಶಂಭು ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಸಮಾಜದ ವಾರ್ಷಿಕ ಮಹಾಸಭೆ ನಡೆದಿದ್ದು, ಇದೇ ಸಂದರ್ಭ ನೂತನ ಆಡಳಿತ ಮಂಡಳಿಗೂ ಚುನಾವಣೆ ನಿಗದಿಯಾಗಿತ್ತು. ಪದಾಧಿಕಾರಿ ಸ್ಥಾನ ಹಾಗೂ ಮಹಿಳಾ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಅನಿವಾರ್ಯವಾಗಿದ್ದರಿಂದ ಈ ಬಾರಿಯ ಚುನಾವಣೆ ತೀವ್ರÀ ಕೌತುಕ ಸೃಷ್ಟಿಸಿತ್ತು.

ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕೊಂಗಂಡ ಎಸ್. ದೇವಯ್ಯ (ಜಯ - 724 ಮತ) ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಮಣವಟ್ಟಿರ ಚಿಣ್ಣಪ್ಪ (783), ಕಾರ್ಯದರ್ಶಿಯಾಗಿ ಅರೆಯಡ ರಮೇಶ್ (751), ಜಂಟಿ ಕಾರ್ಯದರ್ಶಿ / ಖಜಾಂಚಿಯಾಗಿ ಮಾದೇಟಿರ ಪಿ. ಬೆಳ್ಯಪ್ಪ (707) ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಂಡೇಪಂಡ ರತನ್ ಕುಟ್ಟಯ್ಯ 680 ಮತ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಮಂಡೀರ ಪೂಣಚ್ಚ (ದೇವಿ) 614 ಮತ, ಕಾರ್ಯದರ್ಶಿ ಅಭ್ಯರ್ಥಿ ಶಾಂತೆಯಂಡ ಸನ್ನಿ ಪೂವಯ್ಯ 636 ಮತ, ಜಂಟಿ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿಗಳಾಗಿದ್ದ ನಂದಿನೆರವಂಡ ಪೂವಯ್ಯ 473 ಮತ, ಮಂಡಚಂಡ ಭೀಮಯ್ಯ 181 ಮತಗಳಿಸಿದರು.

ಮಹಿಳಾ ನಿರ್ದೇಶಕರಾಗಿ ತಾಪಂಡ ಸರೋಜ ತಮ್ಮಯ್ಯ 845 ಮತ, ಉಳ್ಳಿಯಡ ಗಂಗಮ್ಮ (ಸಚಿತ) 674 ಮತ, ಐಮುಡಿಯಂಡ ರಾಣಿ ಮಾಚಯ್ಯ 661 ಮತ ಗಳಿಸಿ ಜಯಗಳಿಸಿದರು. ಈ ಸ್ಥಾನಕ್ಕೆ ಸ್ಪರ್ಧಿಸಿದ್ದ ಪಳಂಗಂಡ ರಾಧಾದೇವಿ (ಸಬಿತಾ ಪ್ರಸಾದ್) 622 ಮತ, ಮುಕ್ಕಾಟಿರ ಪೊನ್ನಮ್ಮ ಮೊಣ್ಣಪ್ಪ 473 ಮತ, ಪಾಲೆಯಂಡ ರೂಪಾ ಸುಬ್ಬಯ್ಯ 447 ಮತ ಗಳಿಸಿ ಪರಾಜಿತಗೊಂಡರು.

ನಿರ್ದೇಶಕರುಗಳಾಗಿ ಕುಡುವಂಡ ಉತ್ತಪ್ಪ, ಕಾಳೇಂಗಡ ಟಿ. ಮುತ್ತಪ್ಪ, ಚೊಟ್ಟೆಯಂಡ ಅಪ್ಪಾಜಿ, ಪುಟ್ಟಿಚಂಡ ದೇವಯ್ಯ (ಡಾನ್), ನಂದೇಟಿರ ರಾಜಾ ಮಾದಪ್ಪ, ಪೊನ್ನಚೆಟ್ಟೀರ ಸುರೇಶ್ ಸುಬ್ಬಯ್ಯ, ಬೊಟ್ಟೋಳಂಡ ಕಾಶಿ ಅಚ್ಚಯ್ಯ ಹಾಗೂ ಬೊಳ್ಳಜೀರ ಅಯ್ಯಪ್ಪ ಅವರುಗಳು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.