ವೀರಾಜಪೇಟೆ, ಅ. 28: ವೀರಾಜಪೇಟೆಯ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ನವೆಂಬರ್ 1 ರಂದು ಅದ್ಧೂರಿಯ ಕನ್ನಡ ರಾಜ್ಯೋತ್ಸವದ ಆಚರಣೆಗೆ ಪೂರ್ವ ಸಿದ್ಧತೆ ನಡೆಸಲಾಗಿದೆ ಎಂದು ಸಂಘದ ಅಧ್ಯಕ್ಷ ಎನ್.ಎನ್. ಶಿವು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವು, ಸಂಘದಿಂದ ಪ್ರಥಮವಾಗಿ ಕನ್ನಡ ರಾಜ್ಯೋತ್ಸವವನ್ನು ಕೊಡಗು-ಕೇರಳ ಗಡಿ ಭಾಗವಾದ ವೀರಾಜಪೇಟೆಯಲ್ಲಿ ಆಚರಿಸಲಾಗುತ್ತಿದೆ. ನವೆಂಬರ್ 1 ರಂದು ಬೆಳಿಗ್ಗೆ 9.30 ಗಂಟೆಗೆ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯಲ್ಲಿರುವ ಆಟೋ ನಿಲ್ದಾಣದ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಪಾಂಡಂಡ ರಚನ್ ಮೇದಪ್ಪ ಅವರಿಂದ ಧ್ವಜಾರೋಹಣ ನಂತರ ಚಂಡೆ ವಾದ್ಯದೊಂದಿಗೆ ಮುಖ್ಯ ಬೀದಿಗಳಲ್ಲಿ ಭುವನೇಶ್ವರಿಯ ಮೆರವಣಿಗೆ ನಡೆಯಲಿದೆ.

ಸಮಾರಂಭದಲ್ಲಿ ಪಟ್ರಪಂಡ ರಮೇಶ್ ಕರುಂಬಯ್ಯ, ಎಂ.ಎಂ. ಪರಮೆಶ್ವರ, ಇಂದು ಕುಮಾರ್, ನಾಗೇಂದ್ರ, ಮಂಜು ಅಯ್ಯಪ್ಪ, ಗಾಯತ್ರಿ ನರಸಿಂಹ, ಎ. ವನೋಬ್, ಸಿ.ಎ. ನಾಸರ್, ದಾಮೋದರ್ ಆಚಾರ್ಯ, ರ್ಯಾನ್ಸಿ ವರ್ಗೀಸ್, ಮಹದÉೀವ, ಶೇಖರ್ ಹಾಗೂ ಜೀವ ವಿಮಾ ನೌಕರರ ಸಂಘಟನೆಯ ವೀರಾಜಪೇಟೆ ಘಟಕದ ಎಂ.ಎನ್. ಅಚ್ಚಮ್ಮ ಭಾಗವಹಿಸಲಿರುವರು ಎಂದು ತಿಳಿಸಿದರು.

ಸಮಾರೋಪ: ಸಂಘದ ಸಲಹೆಗಾರ ದಾಮೋದರ್ ಆಚಾರ್ಯ ಮಾತನಾಡಿ, ಇಲ್ಲಿನ ಕಾರು ನಿಲ್ದಾಣದ ಮುಲ್ಲೇರ ಜಿಮ್ಮಿ ಅಯ್ಯಪ್ಪ ವೇದಿಕೆಯಲ್ಲಿ ರಾತ್ರಿ 8 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಸಕ ಬೋಪಯ್ಯ, ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ, ಜನತಾದಳ ಪಕ್ಷದ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ, ಸಿ.ಪಿ. ಚಂದ್ರಶೇಖರ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕೆ.ಎನ್. ವಿಶ್ವನಾಥ್, ಕೆ.ವಿ. ಸಂತೋಷ್, ಎ. ಅನಿಲ್, ಕಿರಣ್ ಕುಮಾರ್, ಅಟ್ರಂಗಡ ಅಂಜನ್, ಕಾಳಮಂಡ ಚಂಗಪ್ಪ, ರಾಮನಗರದ ವಿಶ್ವನಾಥ್ ಭಾಗವಹಿಸಲಿರುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಶಿವು ವಹಿಸಲಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮೇರಿಯಂಡ ಪೂವಯ್ಯ, ಕರ್ನಾಟಕ ಸಂಘದ ಅಪ್ಪನೆರವಂಡ ಜೋಯಪ್ಪ, ಸಾಹಿತಿ ಬೇಬಿ ಚಿಣ್ಣಪ್ಪ, ಚಿತ್ರ ಕಲಾವಿದ ಬಿ.ಆರ್. ಸತೀಶ್ ಹಾಗೂ ದಿವಂಗತ ಜಿಮ್ಮಿ ಅಯ್ಯಪ್ಪ ಅವರ ಸ್ಮರಣೆಗಾಗಿ ಅವರ ಪತ್ನಿ ಮುಲ್ಲೇರ ಉಷಾ ಇವರುಗಳನ್ನು ಸನ್ಮಾನಿಸಲಾಗುವದು.

ನಂತರ ಕಾಮಧೇನು ಕ್ರಿಯೇಷನ್ ತಂಡದವರಿಂದ ರಸಮಂಜರಿ ಕಾಂiÀರ್iಕ್ರಮವನ್ನು ಏರ್ಪಡಿಸಲಾಗಿದೆ ಎಂದು ಉಪಾಧ್ಯಕ್ಷ ಮಹದೇವ್ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎ. ನಾಗೇಂದ್ರ, ನಿರ್ದೇಶಕರುಗಳಾದ ರಫೀಕ್, ಕಾರ್ತಿಕ್, ನಾಣಯ್ಯ ಮತ್ತಿತರರು ಹಾಜರಿದ್ದರು.