ಮಡಿಕೇರಿ, ನ. ೨೪: ಸಮೀಪದ ದೇವರಕೊಲ್ಲಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಯುವಕ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಬೆಂಗಳೂರಿನ ನಾಗದೇವನಹಳ್ಳಿಯ ದೀಕ್ಷಿತ್ (೨೨) ಮೃತ ದುರ್ದೈವಿ. ಅಮ್ಮತ್ತಿಯಲ್ಲಿ ಆಯೋಜನೆಗೊಂಡಿದ್ದ ರೋಬಸ್ಟ ರ‍್ಯಾಲಿಯಲ್ಲಿ ಭಾಗವಹಿಸಲು ಬೆಂಗಳೂರಿನಿAದ ಪ್ರಜ್ವಲ್, ದೀಕ್ಷಿತ್ ಹಾಗೂ ಪ್ರಜ್ವಲ್ ಎಂಬವರು ತಮ್ಮ ವಾಹನದಲ್ಲಿ ಆಗಮಿಸಿದ್ದರು. ರ‍್ಯಾಲಿ ಮುಗಿಸಿ ಧರ್ಮಸ್ಥಳಕ್ಕೆಂದು ಯುವಕರು ತಮ್ಮ ಕಾರಿನಲ್ಲಿ ಸಾಗುವ ವೇಳೆ ನಿಯಂತ್ರಣ ತಪ್ಪಿ ದೇವರಕೊಲ್ಲಿಯಲ್ಲಿರುವ ಕಂದಕಕ್ಕೆ ಕಾರು ಉರುಳಿದೆ. ಪರಿಣಾಮ ದೀಕ್ಷಿತ್ ಕೊನೆಯುಸಿರೆಳೆದಿದ್ದು, ಉಳಿದಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.