ಮಡಿಕೇರಿ, ನ. ೨೩: ಮಡಿಕೇರಿ ಗೌಡ ನಾಗರಿಕ ಹುತ್ತರಿ ಆಚರಣೆ ಸಮಿತಿ ವತಿಯಿಂದ ಮಡಿಕೇರಿಯ ಗೌಡ ವಿದ್ಯಾ ಸಂಘದಲ್ಲಿ ಸಾಂಪ್ರದಾಯಿಕವಾಗಿ ಹುತ್ತರಿ ಆಚರಣೆ ಮತ್ತು ಕದಿರು ಹಾಗೂ ತೆನೆ ವಿತರಣೆ ತಾ. ೨೫ ರಂದು ನಡೆಯಲಿದೆ.

ತಾ. ೨೫ ರಂದು ಸಂಜೆ ೬.೨೫ಕ್ಕೆ ನೆರೆಕಟ್ಟುವುದು ಹಾಗೂ ರಾತ್ರಿ ೭.೨೫ಕ್ಕೆ ಸಮಿತಿಯ ಉಪಾಧ್ಯಕ್ಷ ಪೊನ್ನಚನ ಮಧುಸೂದನ್, ಪ್ರೀತು ದಂಪತಿ ಸಾಂಪ್ರದಾಯಕವಾಗಿ ಕದಿರು ತೆಗೆಯಲಿದ್ದು, ನಂತರ ಸಮಾಜದವರು ಹಾಗೂ ಸಾರ್ವಜನಿಕರಿಗೆ ಕದಿರು ವಿತರಣೆ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಅಂಬೇಕಲ್ ನವೀನ್ ಕುಶಾಲಪ್ಪ ತಿಳಿಸಿದ್ದಾರೆ.