ಪಾಣತ್ತೂರು, ನ. ೨೩: ಪಾಣತ್ತೂರು ತಾನತ್ತಿಂಕಾಲ್ ಶ್ರೀ ವಯನಾಟ್ ಕುಲವನ್ ದೇವಸ್ಥಾನದಲ್ಲಿ ನಡೆಯಲಿರುವ ವಯನಾಟ್ ಕುಲವನ್ ತೆಯ್ಯಂ ಕಟ್ಟು ಮಹೋತ್ಸವವು ೨೦೨೭ರ ಮಾರ್ಚ್ ೨೩, ೨೪ ಮತ್ತು ೨೫ ರಂದು ಜರುಗಲಿದೆ. ತೆಯ್ಯಂ ಕಟ್ಟು ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆದ ರಾಶಿ ಚಿಂತನೆಯಲ್ಲಿ (ಪ್ರಶ್ನಾ ಚಿಂತನೆ) ಉತ್ಸವದ ದಿನಾಂಕವನ್ನು ನಿಗದಿಪಡಿಸಲಾಗಿದೆ. ಜನವರಿ ೧೬ರಂದು ‘ಕೂವಂ ಅಳಕ್ಕಲ್’ (ಭತ್ತ ಅಳೆಯುವ) ಶಾಸ್ತೊçÃಕ್ತ ವಿಧಿ ನಡೆಯಲಿದೆ.
ಬಳಿಕ ನಡೆದ ಉತ್ಸವ ಸಮಿತಿ ರಚನಾ ಸಭೆಯನ್ನು ಕಾಸರಗೋಡು ಸಂಸದ ರಾಜ್ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಬಾತ್ತೂರು ಶ್ರೀ ಭಗವತಿ ಕ್ಷೇತ್ರ ಕಳಗಂ ಅಧ್ಯಕ್ಷ ಇ.ಕೆ. ಶಾಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ರಘುನಾಥ್, ಉಪಾಧ್ಯಕ್ಷೆ ಎಂ. ಪದ್ಮಕುಮಾರಿ, ಪನತ್ತಡಿ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಜೆ. ಜೇಮ್ಸ್, ಸುಪ್ರಿಯಾ ಅಜಿತ್, ಬ್ಲಾಕ್ ಪಂಚಾಯಿತಿ ಸದಸ್ಯ ಬಿ. ಸುರೇಶ್, ಪನತ್ತಡಿ ಗ್ರಾಮ ಪಂಚಾಯಿತಿ ಸದಸ್ಯರಾದ ರೀನಾ ಥಾಮಸ್, ಪ್ರಸೀತಾರಾಣಿ, ಭವ್ಯಾ ಜಯರಾಜ್, ಎಂ. ಶಿಬು, ಐ.ಸಿ. ಐಸಾಕ್, ಮಾಜಿ ಕ್ರೆöÊಂ ಬ್ರಾಂಚ್ ಎಸ್.ಪಿ. ಯು. ಪ್ರೇಮನ್, ಕೋಯ್ಮ ಕಾಟ್ಟೂರು ತರವಾಡು ಪ್ರತಿನಿಧಿ ಕಾಟ್ಟೂರು ಮಧುಸೂದನನ್ ನಾಯರ್, ಕಳಗಂ ಪದಾಧಿಕಾರಿಗಳು, ಪಾಣತ್ತೂರು ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್, ಪಾಣತ್ತೂರು ಸೆಂಟ್ ಮೇರಿಸ್ ಚರ್ಚ್ ಧರ್ಮಗುರು ಫಾ. ನೋಬಲ್ ಪಂತಲಾಡಿಕ್ಕಲ್, ದೇವಸ್ಥಾನದ ಅಧ್ಯಕ್ಷ ಮಧು ಚೆಂಬೇರಿ, ಪೋಷಕ ಎನ್. ಬಾಲಚಂದ್ರನ್ ನಾಯರ್, ದೇವಸ್ಥಾನದ ಮಾತೃ ಸಮಿತಿ ಅಧ್ಯಕ್ಷೆ ಶ್ಯಾಮಲಾ ಕೃಷ್ಣನ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಒಕ್ಲಾವ್ ಕೃಷ್ಣನ್, ಎಸ್. ಮಧುಸೂದನನ್, ಎಂ.ಕೆ. ಸುರೇಶ್, ಪ್ರತಾಪ್ ಚಂದ್ರನ್, ಕರಿವೆಳ್ಳೂರು ರಾಜನ್ ಸೇರಿದಂತೆ ಹಲವರು ಮಾತನಾಡಿದರು. ದೇವಸ್ಥಾನದ ಕಾರ್ಯದರ್ಶಿ ಮೋಹನನ್ ಕೋಟ್ಟಕ್ಕುನ್ನು ಸ್ವಾಗತಿಸಿದರು. ಉಪಾಧ್ಯಕ್ಷ ಕೆ.ಎಂ. ಮೋಹನನ್ ವಂದಿಸಿದರು.
ನೂತನ ಪದಾಧಿಕಾರಿಗಳು: ತೆಯ್ಯಂ ಕಟ್ಟು ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪಿ.ಕೆ. ಅರವಿಂದಾಕ್ಷನ್, ಪ್ರಧಾನ ಸಂಚಾಲಕರಾಗಿ ಎ.ಕೆ. ಕುಮಾರನ್ ಹಾಗೂ ಖಜಾಂಚಿಯಾಗಿ ಕೆ. ಬಾಲಕೃಷ್ಣನ್ ಅವರನ್ನು ಆಯ್ಕೆ ಮಾಡಲಾಯಿತು.