(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ನ. ೨೩: ಕುತೂಹಲ ಕೆರಳಿಸಿದ್ದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕ್ಷೇತ್ರವಾರು ಅಂತಿಮ ಮೀಸಲು ಅಧಿಸೂಚನೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಕಟಿಸಿದೆ.ಅಕ್ಟೋಬರ್ ೯ ರಂದು ಕರಡು ಮೀಸಲು ಪಟ್ಟಿ ಪ್ರಕಟಿಸಲಾಗಿತ್ತು. ನಂತರ ಅ. ೧೯ ವರೆಗೆ ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಇದೀಗ ಆಕ್ಷೇಪಣೆ ಅವಧಿ ಮುಗಿದ ಒಂದು ತಿಂಗಳ ಬಳಿಕ ಅಂತಿಮ ಮೀಸಲು ಅಧಿಸೂಚನೆ ಪ್ರಕಟಗೊಂಡಿದೆ.
ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಬದಲಾವಣೆ ಆಗಲಿದೆ ಎಂಬ ರಾಜಕೀಯ ಲೆಕ್ಕಾಚಾರ ನಡೆದಿತ್ತು.ಆದರೆ ಕರಡು ಪಟ್ಟಿಯಲ್ಲಿದ್ದ ಮೀಸಲಾತಿಯನ್ನೇ ಅಂತಿಮ ಅಧಿಸೂಚನೆಯಲ್ಲಿ ಕೂಡ ಪ್ರಕಟಿಸಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ. ಇದರಿಂದ ಟಿಕೆಟ್ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯುಂಟಾಗಿದೆ.
ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಪ್ರಕಟಗೊಂಡ ಬಳಿಕ ಜಿಲ್ಲೆಯಲ್ಲಿ ಅಸಮಾಧಾನ ವ್ಯಕ್ತವಾಗಿತ್ತು.ಆಕ್ಷೇಪಣೆ ಕೂಡ ಸಲ್ಲಿಕೆಯಾಗಿತ್ತು.ಅದಲ್ಲದೇ ಕುಶಾಲನಗರ ತಾಲ್ಲೂಕಿಗೆ ಒಂದೇ ಒಂದು ಸಾಮಾನ್ಯ ಮೀಸಲು ನಿಗದಿಯಾಗದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾಗಬಹುದೆಂಬ ಚರ್ಚೆಗಳು ನಡೆದಿತ್ತು.ಆದರೆ ಯಾವುದೇ ರೀತಿಯಲ್ಲಿ ಬದಲಾವಣೆ ಆಗಿಲ್ಲ. ಕುಶಾಲನಗರ ತಾಲೂಕು ವ್ಯಾಪ್ತಿಯ ಜಿ.ಪಂ. ಕ್ಷೇತ್ರಗಳಲ್ಲಿ ಒಂದೇ ಒಂದು ಸಾಮಾನ್ಯ ಮೀಸಲು ನಿಗದಿಯಾಗಿಲ್ಲ.
ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಕ್ಷೇತ್ರಗಳ ಮೀಸಲಾತಿ ಪಟ್ಟಿ
ಮಕ್ಕಂದೂರು - ಸಾಮಾನ್ಯ (ಮಹಿಳೆ),ಕಾಂತೂರು ಮೂರ್ನಾಡು - ಅನುಸೂಚಿತ ಜಾತಿ (ಮಹಿಳೆ),ನಾಪೋಕ್ಲು - ಹಿಂದುಳಿದ ವರ್ಗ "ಅ" (ಮಹಿಳೆ), ಸಂಪಾಜೆ - ಸಾಮಾನ್ಯ, ಭಾಗಮಂಡಲ- ಅನುಸೂಚಿತ ಪಂಗಡ, ಚೆಯ್ಯಂಡಾಣೆ (ನರಿಯಂದಡ) - ಸಾಮಾನ್ಯ, ಬೆಟ್ಟಗೇರಿ - ಸಾಮಾನ್ಯ (ಮಹಿಳೆ) ಗೋಪಾಲಪುರ - ಸಾಮಾನ್ಯ (ಮಹಿಳೆ), ಕೊಡ್ಲಿಪೇಟೆ - ಅನುಸೂಚಿತ ಜಾತಿ, ಅಬ್ಬೂರುಕಟ್ಟೆ - ಹಿಂದುಳಿದ ವರ್ಗ "ಬ" (ಮಹಿಳೆ),ಶಾಂತಳ್ಳಿ - ಸಾಮಾನ್ಯ, ಬೇಳೂರು ಬಸವನಹಳ್ಳಿ - ಸಾಮಾನ್ಯ (ಮಹಿಳೆ),ಮಾದಾಪುರ - ಸಾಮಾನ್ಯ, ಹೆಬ್ಬಾಲೆ - ಹಿಂದುಳಿದ ವರ್ಗ "ಅ", ಕೂಡಿಗೆ - ಸಾಮಾನ್ಯ ಮಹಿಳೆ, ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಗುಡ್ಡೆಹೊಸೂರು - ಹಿಂದುಳಿದ ವರ್ಗ "ಅ",
ವಾಲ್ನೂರು ತ್ಯಾಗತ್ತೂರು - ಹಿಂದುಳಿದ ವರ್ಗ "ಅ ಮಹಿಳೆ", ಸುಂಟಿಕೊಪ್ಪ - ಅನುಸೂಚಿತ ಜಾತಿ (ಮಹಿಳೆ), ಬಿಟ್ಟಂಗಾಲ - ಹಿಂದುಳಿದ ವರ್ಗ "ಅ",ಅಮ್ಮತ್ತಿ - ಅನುಸೂಚಿತ ಜಾತಿ, ಚೆನ್ನಯ್ಯನಕೋಟೆ - ಅನುಸೂಚಿತ ಪಂಗಡ (ಮಹಿಳೆ),
ಸಿದ್ದಾಪುರ - ಸಾಮಾನ್ಯ (ಮಹಿಳೆ),ಹಾಲುಗುಂದ - ಸಾಮಾನ್ಯ,ಬಾಳೆಲೆ - ಸಾಮಾನ್ಯ (ಮಹಿಳೆ),ಗೋಣಿಕೊಪ್ಪಲು - ಸಾಮಾನ್ಯ,ತಿತಿಮತಿ - ಸಾಮಾನ್ಯ,
ಶ್ರೀಮಂಗಲ - ಅನುಸೂಚಿತ ಪಂಗಡ (ಮಹಿಳೆ),ಹುದಿಕೇರಿ - ಸಾಮಾನ್ಯ,ಟಿ ಶೆಟ್ಟಿಗೇರಿ- ಹಿಂದುಳಿದ ವರ್ಗ "ಅ" (ಮಹಿಳೆ)
(ತಾ.ಪಂ. ವಿವರ ನಾಳಿನ ಸಂಚಿಕೆಯಲ್ಲಿ)