ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಯ ಬರ್ಬರ ಹತ್ಯೆ ಪ್ರಕರಣದಲ್ಲಿ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ತೀರ್ಪು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇಂತಹ ಅಮಾನವೀಯ ಕೃತ್ಯ ಎಸಗಿದ ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕೆಂಬುದು ಬಹುತೇಕರ ಆಶಯವೂ ಹೌದು.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಸಂಗತಿಯಿದೆ. ಜಿಲ್ಲಾ ನ್ಯಾಯಾಲಯ ಮರಣದಂಡನೆ ವಿಧಿಸಿದೆ ಎಂದ ಮಾತ್ರಕ್ಕೆ ಶಿಕ್ಷೆ ತಕ್ಷಣವೇ ಜಾರಿಯಾಗುವುದಿಲ್ಲ. ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮರಣದಂಡನೆಗೆ ಸಂಬAಧಿಸಿದAತೆ ಹಲವು ಕಾನೂನಾತ್ಮಕ ಪ್ರಕ್ರಿಯೆಗಳಿವೆ.
ಹಾಗಾದರೆ ಮುಂದಿನ ಕಾನೂನಾತ್ಮಕ ನಡೆ ಏನು?
ಮೊದಲನೆಯದಾಗಿ, ಸೆಷನ್ಸ್ ನ್ಯಾಯಾಲಯ ವಿಧಿಸಿರುವ ಮರಣದಂಡನೆಯನ್ನು ಕರ್ನಾಟಕ ಹೈಕೋರ್ಟ್ ಕಡ್ಡಾಯವಾಗಿ ಪರಿಶೀಲಿಸಿ ದೃಢೀಕರಿಸಬೇಕು. ಇದನ್ನು ಮರಣದಂಡನೆ ದೃಢೀಕರಣ ಪ್ರಕ್ರಿಯೆ (ಆeಚಿಣh ಖeಜಿeಡಿeಟಿಛಿe) ಎಂದು ಕರೆಯಲಾಗುತ್ತದೆ.
೨೦೨೪ರ ಜುಲೈ ೧ರಿಂದ ಜಾರಿಗೆ ಬಂದಿರುವ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಃಓSS) ಕಲಂ ೪೦೭ರ ಪ್ರಕಾರ, ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದಾಗ ಪ್ರಕರಣದ ದಾಖಲೆಗಳನ್ನು ಹೈಕೋರ್ಟ್ಗೆ ಕಳುಹಿಸಬೇಕು. ಹೈಕೋರ್ಟ್ ದೃಢೀಕರಿಸುವವರೆಗೆ ಮರಣದಂಡನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ.
ಹೈಕೋರ್ಟ್ ಪ್ರಕರಣದ ಸಾಕ್ಷಾö್ಯಧಾರಗಳು, ತನಿಖೆಯ ಕ್ರಮ, ಅಪರಾಧದ ಸ್ವರೂಪ ಹಾಗೂ ಶಿಕ್ಷೆಯ ಪ್ರಮಾಣವನ್ನು ಸ್ವತಂತ್ರವಾಗಿ ಪರಿಶೀಲಿಸುತ್ತದೆ. ಃಓSS ಕಲಂ ೪೦೯ರ ಅಡಿಯಲ್ಲಿ ಹೈಕೋರ್ಟ್ ಮರಣದಂಡನೆಯನ್ನು ದೃಢೀಕರಿಸಬಹುದು, ಕಾನೂನಿನ ಪ್ರಕಾರ ಬೇರೆ ಶಿಕ್ಷೆ ವಿಧಿಸಬಹುದು, ಅಪರಾಧ ನಿರ್ಣಯವನ್ನು ರದ್ದುಗೊಳಿಸಬಹುದು ಅಥವಾ ಮರು ವಿಚಾರಣೆಗೆ ಆದೇಶಿಸಬಹುದು.
ಹೈಕೋರ್ಟ್ ಕೂಡ ಮರಣದಂಡನೆಯನ್ನು ದೃಢೀಕರಿಸಿದರೆ ಅಪರಾಧಿಗೆ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅಥವಾ ವಿಶೇಷ ಅನುಮತಿ ಅರ್ಜಿ (Sಠಿeಛಿiಚಿಟ ಐeಚಿve Peಣiಣioಟಿ) ಸಲ್ಲಿಸುವ ಅವಕಾಶವಿರುತ್ತದೆ.
ಅಲ್ಲಿಯೂ ಶಿಕ್ಷೆ ದೃಢಪಟ್ಟರೆ ಸುಪ್ರೀಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ (ಖevieತಿ Peಣiಣioಟಿ) ಸಲ್ಲಿಸಬಹುದು. ಅದೂ ತಿರಸ್ಕೃತವಾದ ನಂತರ ನ್ಯಾಯಾಲಯ ನಿಗದಿಪಡಿಸಿರುವ ಅತ್ಯಂತ ಸೀಮಿತ ಮಾನದಂಡಗಳ ಅಡಿಯಲ್ಲಿ ಕ್ಯುರೇಟಿವ್ ಅರ್ಜಿ (ಅuಡಿಚಿಣive Peಣiಣioಟಿ) ಸಲ್ಲಿಸುವ ಅವಕಾಶವಿರುತ್ತದೆ.
ಇಷ್ಟೇ ಅಲ್ಲದೆ, ಃಓSS ಕಲಂ ೪೭೨ ಹಾಗೂ ಸಂವಿಧಾನದ ೭೨ ಮತ್ತು ೧೬೧ನೇ ವಿಧಿಗಳ ಅಡಿಯಲ್ಲಿ ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶವೂ ಇದೆ. ಈ ಪ್ರಕ್ರಿಯೆಯಲ್ಲಿ ಮೊದಲು ರಾಜ್ಯಪಾಲರಿಗೆ, ನಂತರ ನಿರಾಕರಣೆಯಾದರೆ ರಾಷ್ಟçಪತಿಗಳಿಗೆ ಅರ್ಜಿ ಸಲ್ಲಿಸುವ ಅವಕಾಶವಿದೆ. ಹೀಗೆ ಲಭ್ಯವಿರುವ ಕಾನೂನಾತ್ಮಕ ಅವಕಾಶಗಳು ಮತ್ತು ಅಗತ್ಯ ಪ್ರಕ್ರಿಯೆಗಳು ಮುಗಿದ ನಂತರವಷ್ಟೇ ಮರಣದಂಡನೆ ಜಾರಿಗೊಳಿಸುವ ಅಂತಿಮ ಹಂತ ತಲುಪುತ್ತದೆ.
ಗೋವಿಂದಸ್ವಾಮಿ- ಸೌಮ್ಯ ಪ್ರಕರಣ: ನಮ್ಮ
ನ್ಯಾಯಾಂಗ ವ್ಯವಸ್ಥೆ ನೀಡಿದ ಪಾಠ
ಮರಣದಂಡನೆ ಕುರಿತ ಚರ್ಚೆಯಲ್ಲಿ ಕೇರಳದ ಸೌಮ್ಯ ಪ್ರಕರಣವನ್ನು ನೆನಪಿಸಿಕೊಳ್ಳುವುದು ಅಗತ್ಯ. ೨೦೧೧ರ ಫೆಬ್ರವರಿ ೧ರಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ೨೩ ವರ್ಷದ ಸೌಮ್ಯ ಎಂಬ ಯುವತಿಯ ಮೇಲೆ ಗೋವಿಂದಸ್ವಾಮಿ ಎಂಬಾತ ಅತ್ಯಾಚಾರ ಎಸಗಿದ್ದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಗೋವಿಂದಸ್ವಾಮಿಗೆ ಮರಣದಂಡನೆ ವಿಧಿಸಿತ್ತು. ಕೇರಳ ಹೈಕೋರ್ಟ್ ಕೂಡ ಆ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಆದರೆ ಪ್ರಕರಣ ಸುಪ್ರೀಂಕೋರ್ಟ್ಗೆ ತಲುಪಿದಾಗ ಸಾಕ್ಷಾö್ಯಧಾರಗಳು ಮತ್ತು ಅಪರಾಧದ ಕಾನೂನಾತ್ಮಕ ಸ್ವರೂಪದ ಕುರಿತು ಮಹತ್ವದ ಮರುಪರಿಶೀಲನೆ ನಡೆಯಿತು. ೨೦೧೬ರ ಸೆಪ್ಟೆಂಬರ್ ೧೫ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ಸೌಮ್ಯಳ ಮೇಲಿನ ಅತ್ಯಾಚಾರದ ಆರೋಪವನ್ನು ದೃಢಪಡಿಸಿ ಜೀವಾವಧಿ ಶಿಕ್ಷೆಯನ್ನು ಉಳಿಸಿತು. ಆದರೆ ಕೊಲೆ ಆರೋಪವನ್ನು ಸಾಬೀತುಪಡಿಸಲು ಅಗತ್ಯವಾದ ಉದ್ದೇಶ ಅಥವಾ ಕಾನೂನಾತ್ಮಕ ಜ್ಞಾನವನ್ನು ಸಾಬೀತುಪಡಿಸಲು ಸಾಕಷ್ಟು ಆಧಾರಗಳಿಲ್ಲ ಎಂಬ ನಿರ್ಣಯಕ್ಕೆ ಬಂದಿತು.
ಹೀಗಾಗಿ ಭಾರತೀಯ ದಂಡ ಸಂಹಿತೆಯ ಕಲಂ ೩೦೨ರ ಅಡಿಯಲ್ಲಿದ್ದ ಕೊಲೆ ಆರೋಪವನ್ನು ರದ್ದುಗೊಳಿಸಿ, ಸಂಬAಧಿತ ಹಲ್ಲೆಯ ಕೃತ್ಯವನ್ನು ಕಲಂ ೩೨೫ರ ಅಡಿಯಲ್ಲಿ ಗಂಭೀರ ಗಾಯ ಉಂಟುಮಾಡಿದ ಅಪರಾಧವೆಂದು ಪರಿಗಣಿಸಿತು. ಈ ಅಪರಾಧಕ್ಕೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತು. ಅತ್ಯಾಚಾರದ ಕಲಂ ೩೭೬ರ ಅಡಿಯಲ್ಲಿದ್ದ ಜೀವಾವಧಿ ಶಿಕ್ಷೆ ಸೇರಿದಂತೆ ಉಳಿದ ಶಿಕ್ಷೆಗಳನ್ನು ಎತ್ತಿಹಿಡಿಯಿತು. ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ ಜಾರಿಯಾಗಬೇಕೆಂದು ಆದೇಶಿಸಿತು.
ಈ ತೀರ್ಪಿನ ವಿರುದ್ಧ ಕೇರಳ ಸರ್ಕಾರ ಹಾಗೂ ಸೌಮ್ಯಳ ತಾಯಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ೨೦೧೬ರ ನವೆಂಬರ್ ೧೧ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ನಂತರ ಕೇರಳ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನೂ ೨೦೧೭ರ ಏಪ್ರಿಲ್ ೨೭ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತು.
ಈ ಪ್ರಕರಣದ ಮುಖ್ಯ ಪಾಠವೇನೆಂದರೆ, ಸಾರ್ವಜನಿಕ ಆಕ್ರೋಶ ಎಷ್ಟೇ ತೀವ್ರವಾಗಿರಲಿ, ಅಪರಾಧದ ಕ್ರೌರ್ಯ ಎಷ್ಟೇ ಭೀಕರವಾಗಿರಲಿ, ನ್ಯಾಯಾಲಯವು ಕಾನೂನಿನ ಅಡಿಯಲ್ಲಿ ಸಾಬೀತಾದ ಸಾಕ್ಷಾö್ಯಧಾರಗಳ ಆಧಾರದ ಮೇಲೆಯೇ ತೀರ್ಪು ನೀಡಬೇಕಾಗುತ್ತದೆ.
ಮರಣದಂಡನೆ ಎಂದರೇನು?
ಮರಣದAಡನೆ ಎಂದರೆ ಅತ್ಯಂತ ಗಂಭೀರ ಅಪರಾಧಗಳಿಗೆ ನ್ಯಾಯಾಲಯ ವಿಧಿಸುವ ಅತ್ಯುನ್ನತ ಶಿಕ್ಷೆ. ಭಾರತದಲ್ಲಿ ಪ್ರತಿಯೊಂದು ಕೊಲೆ ಪ್ರಕರಣಕ್ಕೂ ಮರಣದಂಡನೆ ವಿಧಿಸುವುದಿಲ್ಲ. ಸುಪ್ರೀಂ ಕೋರ್ಟ್ ರೂಪಿಸಿರುವ 'ಅಪರೂಪದಲ್ಲಿಯೇ ಅಪರೂಪದ ಪ್ರಕರಣ' (ಖಚಿಡಿesಣ oಜಿ ಖಚಿಡಿe) ಎಂಬ ತತ್ವದ ಅಡಿಯಲ್ಲಿ ಮಾತ್ರ ಈ ಶಿಕ್ಷೆಯನ್ನು ವಿಧಿಸಬೇಕು. ಅಪರಾಧದ ಗಂಭೀರತೆಯ ಜೊತೆಗೆ ಅಪರಾಧಿಯ ಹಿನ್ನೆಲೆ, ಸುಧಾರಣೆಯ ಸಾಧ್ಯತೆ ಹಾಗೂ ಇತರ ಅನುಕೂಲಕರ ಮತ್ತು ಪ್ರತಿಕೂಲ ಅಂಶಗಳನ್ನೂ ನ್ಯಾಯಾಲಯ ಪರಿಗಣಿಸಬೇಕಾಗುತ್ತದೆ.
ಮರಣದಂಡನೆಯನ್ನು ಬೆಂಬಲಿಸುವವರು ಇಂತಹ ಕ್ರೂರ ಅಪರಾಧಗಳಿಗೆ ಅತ್ಯಂತ ಕಠಿಣ ಶಿಕ್ಷೆಯೇ ಸೂಕ್ತ ಎನ್ನುತ್ತಾರೆ. ವಿರೋಧಿಸುವವರು ಜೀವ ತೆಗೆಯುವ ಶಿಕ್ಷೆಗಿಂತ ಜೀವಾವಧಿ ಶಿಕ್ಷೆ ಮತ್ತು ನ್ಯಾಯಾಂಗದ ಸುಧಾರಣಾ ದೃಷ್ಟಿಕೋನಕ್ಕೆ ಆದ್ಯತೆ ನೀಡುತ್ತಾರೆ.
ಸೂರ್ಲಬ್ಬಿ ಪ್ರಕರಣಕ್ಕೂ ಇದೇ ಕಾನೂನಾತ್ಮಕ ಎಚ್ಚರಿಕೆ ಅಗತ್ಯವೇ?
ಸೌಮ್ಯ ಪ್ರಕರಣ ಮತ್ತು ಸೂರ್ಲಬ್ಬಿ ಪ್ರಕರಣಗಳ ಘಟನೆಗಳು, ಸಾಕ್ಷ್ಯಾಧಾರಗಳು ಹಾಗೂ ಕಾನೂನಾತ್ಮಕ ಅಂಶಗಳು ಒಂದೇ ರೀತಿಯವುಗಳಲ್ಲ. ಆದ್ದರಿಂದ ಎರಡನ್ನೂ ನೇರವಾಗಿ ಹೋಲಿಸುವುದು ಸರಿಯಲ್ಲ. ಆದರೆ ಒಂದು ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ನೀಡಿದ ಮರಣದಂಡನೆಯನ್ನು ಸುಪ್ರೀಂ ಕೋರ್ಟ್ ಸಾಕ್ಷಾö್ಯಧಾರಗಳ ಮರುಪರಿಶೀಲನೆಯ ನಂತರ ಬದಲಾಯಿಸಿರುವುದು, ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೇಲ್ಮನವಿ ಪ್ರಕ್ರಿಯೆ ಎಷ್ಟು ಮಹತ್ವದ್ದು ಎಂಬುದನ್ನು ತೋರಿಸುತ್ತದೆ. ಸೂರ್ಲಬ್ಬಿ ಪ್ರಕರಣದಲ್ಲಿಯೂ ಕರ್ನಾಟಕ ಹೈಕೋರ್ಟ್ ಮುಂದೆ ಪ್ರಕರಣದ ಸಂಪೂರ್ಣ ಸಾಕ್ಷಾö್ಯಧಾರಗಳು ಪರಿಶೀಲನೆಗೆ ಒಳಪಡಲಿವೆ. ಆ ಪ್ರಕ್ರಿಯೆಯ ಫಲಿತಾಂಶ ಏನಾಗಲಿದೆ ಎಂಬುದನ್ನು ಈಗಲೇ ಊಹಿಸುವುದು ಸರಿಯಲ್ಲ.
ಕೊನೆಯದಾಗಿ ಕೆಲವು ಪ್ರಶ್ನೆಗಳು...
ಒಂದು ಬಾಲಕಿಯ ಬದುಕು ಕ್ರೂರವಾಗಿ ಅಂತ್ಯಗೊAಡಿದೆ. ಆಕೆಯ ಕುಟುಂಬದ ನೋವಿಗೆ ಯಾವುದೇ ಶಿಕ್ಷೆಯೂ ಸಂಪೂರ್ಣ ಪರಿಹಾರವಾಗಲಾರದು. ಅಪರಾಧಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ, ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸದಂತೆ ಸಮಾಜದಲ್ಲಿ ಸುರಕ್ಷಿತ ವಾತಾವರಣ ನಿರ್ಮಾಣವಾಗುವುದೂ ಅಷ್ಟೇ ಮುಖ್ಯ.
ನ್ಯಾಯವೆಂದರೆ ಅಪರಾಧಿಗೆ ಶಿಕ್ಷೆ ವಿಧಿಸುವುದಷ್ಟೇ ಅಲ್ಲ. ಅಪರಾಧ ನಡೆಯದಂತೆ ತಡೆಯುವ ವ್ಯವಸ್ಥೆಯನ್ನು ನಿರ್ಮಿಸುವುದೂ ನ್ಯಾಯದ ಭಾಗವೇ ಆಗಿದೆ. ಮರಣದಂಡನೆಯೇ ಅಂತಿಮ ನ್ಯಾಯವೇ? ಅಥವಾ ಅಪರಾಧ ತಡೆಗಟ್ಟುವಿಕೆ, ತ್ವರಿತ ನ್ಯಾಯ ಮತ್ತು ಬಲಿಷ್ಠ ಕಾನೂನು ವ್ಯವಸ್ಥೆಯೇ ನಿಜವಾದ ಪರಿಹಾರವೇ? ಈ ಪ್ರಶ್ನೆ ಕೇವಲ ನ್ಯಾಯಾಂಗದ ಮುಂದಿರುವುದಲ್ಲ, ನಮ್ಮೆಲ್ಲರ ಮುಂದೆಯೂ ಇದೆ.
-ರಂಜಿತ್ ಕವಲಪಾರ,
ಮೊ. ೯೧೧೩೦೬೯೮೨೭