ಮಡಿಕೇರಿ, ನ. ೨೩: ಕೊಡವಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ಕೊಡವರ ಜನ್ಮಸಿದ್ಧ, ಅಂತರ್ಗತ, ಮೂಲಭೂತ, ಸಾಂವಿಧಾನಿಕ ಹಾಗೂ ಮಾನವ ಹಕ್ಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಅಓಅ) ಅಧ್ಯಕ್ಷ ಎನ್.ಯು. ನಾಚಪ್ಪ ಪ್ರತಿಪಾದಿಸಿದರು.
ಹುದಿಕೇರಿಯಲ್ಲಿ ಸೋಮವಾರ ನಡೆದ ಸಿಎನ್ಸಿಯ ೧೧ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರ ಪ್ರಾಚೀನ ಮಾತೃಭೂಮಿ, ವಿಶಿಷ್ಟ ಜನಾಂಗೀಯ ಗುರುತು, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ರಕ್ಷಣೆಗೆ ಸಂವಿಧಾನದ ೨೪೪, ೩೭೧ನೇ ವಿಧಿಗಳು ಹಾಗೂ ೫ನೇ ಮತ್ತು ೬ನೇ ಅನುಸೂಚಿಗಳ ತತ್ವಗಳಡಿ ಸ್ವಾಯತ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಭಾರತದ ವಿವಿಧ ಪ್ರದೇಶಗಳಿಗೆ ನೀಡಿರುವ ಸ್ವಾಯತ್ತ ವ್ಯವಸ್ಥೆಗಳ ಮಾದರಿಯಲ್ಲಿ ಕೊಡವಲ್ಯಾಂಡ್ಗೂ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತ ನೀಡಬೇಕು. ಕೊಡವರು ಜಾತಿ ಅಥವಾ ಧರ್ಮವಲ್ಲ, ವಿಶಿಷ್ಟ ಜನಾಂಗೀಯ ಸಮುದಾಯವಾಗಿದ್ದು, ೨೦೨೭ರ ರಾಷ್ಟಿçÃಯ ಜನಗಣತಿಯಲ್ಲಿ ಪ್ರತ್ಯೇಕವಾಗಿ ಗುರುತಿಸಿ ದಾಖಲಿಸಬೇಕು ಎಂದು ಹೇಳಿದರು.
೧೯೫೬ರಲ್ಲಿ ಕೂರ್ಗ್ ರಾಜ್ಯ ಕರ್ನಾಟಕದಲ್ಲಿ ವಿಲೀನಗೊಂಡಿದ್ದು ಹಾಗೂ ೧೯೪೧ರ ನಂತರ ಕೊಡವರ ಪ್ರತ್ಯೇಕ ಜನಾಂಗೀಯ ಗುರುತಿನ ಎಣಿಕೆ ನಿಂತಿದ್ದು, ಕೊಡವರ ಅಸ್ಮಿತೆಗೆ ಐತಿಹಾಸಿಕ ಹಿನ್ನಡೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೊಡವರ ಭೂಮಿ, ನೀರು, ಸಂಸ್ಕೃತಿ, ಪರಿಸರ ಮತ್ತು ಜೀವವೈವಿಧ್ಯತೆಯನ್ನು ರಕ್ಷಿಸಲು ಸ್ವಾಯತ್ತತೆ ಅಗತ್ಯವಿದೆ ಎಂದರು.
ಕೊಡವ ಭಾಷೆಗೆ ೮ನೇ ಅನುಸೂಚಿಯಲ್ಲಿ ಸ್ಥಾನ, ಕೊಡವರ ಅಧ್ಯಾತ್ಮಿಕ ತಾಣಗಳಾದ ಮಂದ್ ಮತ್ತು ದೇವಬನಗಳಿಗೆ ಮಾನ್ಯತೆ, ತಲಕಾವೇರಿಯ ಪವಿತ್ರತೆಯ ಗುರುತಿಸುವಿಕೆ, ದೇವಟ್ಪರಂಬು ನರಮೇಧ ಸ್ಥಳದಲ್ಲಿ ಸ್ಮಾರಕ ನಿರ್ಮಾಣ, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ಮಾದರಿಯ ರಕ್ಷಣೆ ಹಾಗೂ ಕೊಡವ ಸಾಂಪ್ರದಾಯಿಕ ಬಂದೂಕು ಪರಂಪರೆಗೆ ಸಂವಿಧಾನಾತ್ಮಕ ಮಾನ್ಯತೆ ನೀಡುವಂತೆ ಒತ್ತಾಯಿಸಿದರು.
ಕೊಡಗಿನಲ್ಲಿ ವಾಣಿಜ್ಯ ಭೂ ಪರಿವರ್ತನೆ, ರೆಸಾರ್ಟ್ಗಳು ಮತ್ತು ಬೃಹತ್ ನಿರ್ಮಾಣಗಳಿಂದ ನೈಸರ್ಗಿಕ ಜಲಮೂಲಗಳು, ಕಾಫಿ ತೋಟಗಳು ಹಾಗೂ ಅರಣ್ಯ ಪ್ರದೇಶಗಳಿಗೆ ಹಾನಿಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಡವರ ಪಾರಂಪರಿಕ ಭೂಮಿ ಮತ್ತು ಹಕ್ಕುಗಳನ್ನು ರಕ್ಷಿಸುವಂತೆ ಎನ್.ಯು.ನಾಚಪ್ಪ ಆಗ್ರಹಿಸಿದರು. ಮಾನವ ಸರಪಳಿಯಲ್ಲಿ ಭಾಗವಹಿಸಿದವರು ಕೊಡವರ ಭೂಮಿ, ಸಂಸ್ಕೃತಿ ಮತ್ತು ಹಕ್ಕುಗಳ ರಕ್ಷಣೆಗೆ ಸಿಎನ್ಸಿಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭ ಮಾಣಿಪಂಡ ಪಾರ್ವತಿ ಜೋಯಪ್ಪ, ಮೂಡೆರ ಸುಮಿ ದೇವಯ್ಯ, ಬಾಚರಣಿಯಂಡ ಜಾನಕಿ, ನೂರೆರ ಸಹನಾ ಮುತ್ತಮ್ಮ, ಅಜ್ಜಿಕುಟ್ಟಿರ ಸುಶೀಲ, ನಾಮೆರ ಸೋನು, ಕೋಟೆರ ಅಶ್ವಿ ಅಕ್ಕಮ್ಮ, ಚಂಗುಲAಡ ಸೂರಜ್, ಚೆಕ್ಕೆರ ಸಚಿನ್ ಸೋಮಯ್ಯ, ಕೋಳೆರ ರಾಜ ನರೇಂದ್ರ, ಬಾಚರಣಿಯಂಡ ಚಿಪ್ಪಣ್ಣ ಕೊಡವ, ಕಿರಿಯಮಾಡ ಶೆರಿನ್ ಕೊಡವ, ಅಜ್ಜಿಕುಟ್ಟಿರ ಲೋಕೇಶ್ ಕೊಡವ, ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಕಿರುಂದAಡ ಸುಬ್ರಮಣಿ, ಬೊಜ್ಜಂಗಡ ಬೋಪಣ್ಣ, ಕಿರಿಯಮಾಡ ಪೊನ್ನಪ್ಪ, ಮಾದಿರ ಪೆಮ್ಮಯ್ಯ, ಬಲ್ಯಮಿದೇರಿರ ಚಿಟ್ಯಪ್ಪ, ಚೆಕ್ಕೆರ ಪೊನ್ನಪ್ಪ, ಕಳಕಂಡ ರೋಹಿತ್, ಚೆಕ್ಕೆರ ಮದನ್ ಬೋಪಣ್ಣ, ಬಯವಂಡ ಮೋಹನ್ ಜುಗುಣು, ಮಂಡAಗಡ ಯೋಗೇಶ್, ಮಚ್ಚಮಡ ಮದನ್ ಮಂದಣ್ಣ, ಚಂಗುಲAಡ ಪವನ್, ಇಟ್ಟಿರ ಕಾಶಿ, ಬೊಟ್ಟಂಗಡ ಜಪ್ಪು ಕೊಡವ, ಗುಡ್ಡಮಾಡ ಭೀಮಯ್ಯ, ಚಂಗುಲAಡ ಕಾರ್ಯಪ್ಪ, ಕಾಡ್ಯಮಡ ಕಿರಣ್ ಕಾರ್ಯಪ್ಪ, ಬೊಳ್ಳಜಿರ ಕಾವೇರಪ್ಪ, ಚಂಗುಲAಡ ಈಶ, ಬಾನಂಗಡ ಅರುಣ್, ಬೊಜ್ಜಂಗಡ ಪೂಣಚ್ಚ, ಚೇಂದಿರ ಬೋಪಣ್ಣ, ಕೊಳ್ಳಿಮಡ ಚಿಪ್ಪಿ ಕಾರ್ಯಪ್ಪ, ಕೋಟೆರ ಸೋಮಯ್ಯ, ಪಾರುವಂಗಡ ಸುರೇಶ್, ಬಲ್ಯಮಿದೇರಿರ ರಮೇಶ್, ಕುಪ್ಪಣಮಾಡ ವಾಸು, ಕೋಟ್ರಮಾಡ ಪೂಣಚ್ಚ, ನೂರೆರ ಮುತ್ತಣ್ಣ, ಕಳ್ಳೆಂಗಡ ಲೋಕನಾಥ್, ಅಜ್ಜಮಾಡ ಕಾವೇರಪ್ಪ, ಮಚ್ಚಮಾಡ ರಂಜಿ, ನೂರೆರ ದಿಲೀಪ್, ಕಿರಿಯಮಾಡ ಮಾಚಯ್ಯ, ಬಲ್ಯಮಿದೇರಿರ ಸಂಜು, ಕಳ್ಳೆಂಗಡ ಸುಬ್ಬಯ್ಯ, ಪಾಲೆಕಂಡ ಪ್ರಧಾನ್ ಪೂಣಚ್ಚ, ಐತಿಚಂಡ ಪೂವಣ್ಣ, ಬೂವಕಂಡ ಅಣ್ಣಯ್ಯ, ದಡ್ಡೆರ ಪ್ರಭು, ಬಯವಂಡ ದೇವಯ್ಯ, ಪೆಮ್ಮಣಮಾಡ ಬೋಪಣ್ಣ, ಕೋಳೆರ ಮಿಲನ್ ಉತ್ತಪ್ಪ, ಕೆ. ಪೂಣಚ್ಚ, ತೀತಿರ ನಾಣಯ್ಯ, ಬೊಜ್ಜಂಗಡ ದೀಪು ತಿಮ್ಮಯ್ಯ, ಮಂಡAಗಡ ಜನಕ, ಕಿರಿಯಮಾಡ ಮಿಲನ್ ಗಣಪತಿ, ಕೇಚಮಡ ಹರ್ಷ ಮೇದಪ್ಪ, ಬೊಳ್ಳಜಿರ ಅಯ್ಯಪ್ಪ, ಬೊಳಂದAಡ ಕಾವೇರಪ್ಪ, ನೂರೆರ ಕುಟ್ಟಪ್ಪ, ಅಜ್ಜಿಕುಟ್ಟಿರ ನವೀನ್, ಬಲ್ಯಮಾಡ ನಂಜಪ್ಪ ಹಾಗೂ ಕೋಟೆರ ವಿನು ಹಾಜರಿದ್ದರು.
ಚಂಗುಲAಡ ಸೂರಜ್ ಸ್ವಾಗತಿಸಿದರು. ಬಾಚರಣಿಯಂಡ ಚಿಪ್ಪಣ್ಣ ವಂದನಾರ್ಪಣೆಗೈದರು. ಮುಂದಿನ ೧೨ನೇ ಮಾನವ ಸರಪಳಿ ಡಿಸೆಂಬರ್ ೭ರಂದು ಚೆಯ್ಯಂಡಾಣೆಯಲ್ಲಿ ನಡೆಯಲಿದೆ.