ಮಹಿಳಾ ವಿಭಾಗದ ಫೈನಲ್ ಪಂದ್ಯದಲ್ಲಿ ಸಿಬಿಡಿಟಿ ದೆಹಲಿ ಮಹಿಳಾ ತಂಡವು ಬಿಬಿಸಿಎಲ್ ಮುಂಬೈ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿ ಕೈಗ್ ಹಾಕಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸಿಬಿಡಿಟಿ ದೆಹಲಿ ತಂಡ ಮೊದಲಾರ್ಧದಲ್ಲಿ ಗೋಲು ದಾಖಲಿಸುವ ಮೂಲಕ ಮುನ್ನಡೆ ಸಾಧಿಸಿತು. ಮಧ್ಯಂತರದ ಬಳಿಕವೂ ತನ್ನ ಆಟದ ವೇಗವನ್ನು ಕಾಯ್ದುಕೊಂಡ ದೆಹಲಿ ತಂಡ ಮತ್ತೊಂದು ಗೋಲು ಬಾರಿಸಿ ಮುನ್ನಡೆಯ ಅಂತರವನ್ನು ಹೆಚ್ಚಿಸಿಕೊಂಡಿತು. ಗೆಲುವಿಗಾಗಿ ಕೊನೆಯವರೆಗೂ ಹೋರಾಡಿದ ಬಿಬಿಸಿಎಲ್ ಮುಂಬೈ ತಂಡ ಒಂದು ಗೋಲು ದಾಖಲಿಸಿತಾದರೂ ಪಂದ್ಯವನ್ನು ಸಮಬಲಗೊಳಿಸಲು ಸಾಧ್ಯ ವಾಗಲಿಲ್ಲ.
ಅಂತಿಮವಾಗಿ ಸಿಬಿಡಿಟಿ ದೆಹಲಿ ತಂಡ ೨-೧ ಗೋಲುಗಳ ಅಂತರದಿAದ ಜಯಗಳಿಸಿ ಕೈಗ್ ಮಹಿಳಾ ಹಾಕಿ ಕಪ್ನ ಪ್ರಥಮ ಆವೃತ್ತಿಯ ಚಾಂಪಿಯನ್ ಎನಿಸಿಕೊಂಡಿತು. ಬಿಬಿಸಿಎಲ್ ಮುಂಬೈ ತಂಡ ರನ್ನರ್ ಅಪ್ ಪ್ರಶಸ್ತಿಗೆ ಭಾಜನವಾಯಿತು.
ಸಿಬಿಡಿಟಿ ದೆಹಲಿ ತಂಡದ ಪರ ಜೀವನ್ ಹಾಗೂ ಸಾಕ್ಷಿ ತಲಾ ಒಂದು ಗೋಲು ದಾಖಲಿಸಿದರೆ, ಬಿಬಿಸಿಎಲ್ ಮುಂಬೈ ತಂಡದ ಪರ ಗೌಹಾಂಡಿ ಏಕೈಕ ಗೋಲು ಬಾರಿಸಿದರು.
ಮಹಿಳಾ ಹಾಕಿ ಪಂದ್ಯಾವಳಿಗೆ ಅಪರ ಜಿಲ್ಲಾಧಿಕಾರಿ ಜಯಲಕ್ಷಿö್ಮ ಚಾಲನೆ ನೀಡಿದರು.
ಈ ಸಂದರ್ಭ ಹಾಕಿ ಇಂಡಿಯಾ ಕೋಚ್ ಜನಾರ್ದನ ಸಾಲಿಯಾನ್, ಕೈಗ್ ಸಂಸ್ಥೆಯ ವ್ಯವಸ್ಥಾಪಕ ಹಾಕಿ ಇಂಡಿಯಾದ ತೀರ್ಪುಗಾರರಾದ ಕಲ್ಮಾಡಂಡ ಸೋಮಣ್ಣ ಹಾಗೂ ತಾಮರೈ ಕಣ್ಣನ್ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕುಟ್ಟಂಡ ಪೂಣಚ್ಚ, ಚೇಂದ್ರಿಮಾಡ ಗ್ಯಾನ್ ಗಣಪತಿ, ಕಿರಿಯಮಾಡ ಗೋಕುಲ್ ಅವರ ಪರವಾಗಿ ಸೀತಾ ಬೆಳ್ಯಪ್ಪ, ಅಂತರಾಷ್ಟಿçÃಯ ತೀರ್ಪುಗಾರ್ತಿ ಪುಚ್ಚಿಮಂಡ ಅನುಪಮ ಶಿವಪ್ಪ ಅವರ ಪರವಾಗಿ ಅವರ ತಾಯಿ ಶಾಂತಿ ಶಿವಪ್ಪ ಹಾಗೂ ಅವರೆಮಾದಂಡ ಪಚ್ಚು ಕುಶಾಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.