ಮಡಿಕೇರಿ, ನ. ೨೨: ಸಿಕ್ಕಿಂನ ಪಾಲ್‌ಜೋರ್ ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧೀನದಲ್ಲಿ ನವೆಂಬರ್ ೧೪ ರಿಂದ ೨೧ ರ ತನಕ ನಡೆದ ಜೂನಿಯರ್ ನ್ಯಾಷನಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ೧೯ ವರ್ಷದೊಳಗಿನ ಬಾಲಕಿಯರ ವಿಭಾಗದ ಡಬಲ್ಸ್ನಲ್ಲಿ ಭಾರತದ ಪ್ರಥಮ ಶ್ರೇಯಾಂಕಿತ ಕರ್ನಾಟಕದ ಆಟಗಾರ್ತಿಯಾದ ಕೊಡಗಿನ ದಿಯಾ ಭೀಮಯ್ಯ ಚಾಂಪಿಯನ್ ಪಟ್ಟ ಗಳಿಸಿದ್ದಾರೆ.

ಹರಿಯಾಣದ ಬಾರುನಿ ಪರಸ್ವಾಲ್ ಜೊತೆಗೂಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ಉತ್ತರಾಖಂಡ್‌ನ ಆನ್ಯ ಬಿಷ್ಟ್ ಮತ್ತು ಏಂಜಲ್ ಪುನೇರ ಜೋಡಿ ವಿರುದ್ಧ ದಿಯಾ ಹಾಗೂ ಬಾರುನಿ ೧೦-೧೫,೧೫-೧೨,೧೫-೧೨ ಅಂಕಗಳಿAದ ವಿಜಯಗಳಿಸಿದರು.