ಮಡಿಕೇರಿ, ನ. ೨೨: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ೨೪ನೇ ಕೊಡವ ಪುಸ್ತಕ ಪತ್ತಾಯ ಕಾರ್ಯಕ್ರಮ ಬೆಟ್ಟತ್ತೂರಿನ ಕೂಪದಿರ ಐನ್ಮನೆಯಲ್ಲಿ ತಾ.೨೬ ರಂದು ಬೆಳಿಗ್ಗೆ ೧೧.೩೦ ಗಂಟೆಗೆ ನಡೆಯಲಿದೆ. ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಸಾಹಿತಿ, ಕೂಪದಿರ ಸುಂದರಿ ಮಾಚಯ್ಯ ಪತ್ತಾಯ ಉದ್ಘಾಟನೆ ಮಾಡಲಿದ್ದಾರೆ. ಕೂಪದಿರ ಕುಟುಂಬದ ಅಧ್ಯಕ್ಷರಾಗಿರುವ, ಕೂಪದಿರ ಪುಷ್ಪ ಮುತ್ತಪ್ಪ, ಉಪಾಧ್ಯಕ್ಷ ಕೂಪದಿರ ವಿಜಯ್, ಕಾರ್ಯದರ್ಶಿ ಕೂಪದಿರ ರಮೇಶ್ ಹಾಗೂ ಖಜಾಂಚಿ ಕೂಪದಿರ ಶಾರದ ನಂಜಪ್ಪ ಭಾಗವಹಿಸಲಿದ್ದಾರೆ.