ಸುಂಟಿಕೊಪ್ಪ, ನ. ೨೧: ಹಾರಂಗಿ ಹಿನ್ನೀರಿನಲ್ಲಿ ಮುಳುಗಿದ್ದ ಯುವಕನ ಶವ ಪತ್ತೆಯಾಗಿದೆ. ತಾ. ೧೯ ರಂದು ಸಮೀಪದ ಹೇರೂರು ಹಾಡಿಯ ನಿವಾಸಿ ವಿನೋದ್ (೨೭) ಎಂಬಾತ ಹಾರಂಗಿ ಹಿನ್ನೀರಿನಲ್ಲಿ ಮೀನು ಹಿಡಿಯಲು ತೆರಳಿದ್ದ ಸಂದರ್ಭ ಕಾಲುಜಾರಿ ಬಿದ್ದು ಅಸುನೀಗಿದ್ದ. ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸುಂಟಿಕೊಪ್ಪ ಪೊಲೀಸರು, ಅಗ್ನಿಶಾಮಕ ದಳದವರು ಹಿನ್ನೀರಿನಲ್ಲಿ ೨ ದಿನಗಳ ಕಾಲ ಶವಕ್ಕಾಗಿ ಹುಡುಕಾಡಿದ್ದು, ಶವ ಪತ್ತೆಯಾಗಿರಲಿಲ್ಲ.

ಇಂದು ಬೆಳಿಗ್ಗೆ ಶವವು ನೀರಿನಲ್ಲಿ ತೇಲಾಡುತ್ತಿದ್ದ ವೇಳೆ ಪೊಲೀಸರು ಸ್ಥಳಕ್ಕೆ ತೆರಳಿ ಶವವನ್ನು ನೀರಿನಿಂದ ಹೊರತೆಗೆದರು. ಶವವನ್ನು ಕುಶಾಲನಗರ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಸಂಬAಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಠಾಣಾಧಿಕಾರಿ ಮೋಹನ್ ರಾಜ್ ತಿಳಿಸಿದ್ದಾರೆ.