ಸಿದ್ದಾಪುರ, ನ. ೧೯: ಸಿದ್ದಾಪುರದ ಬಸ್ ನಿಲ್ದಾಣದಲ್ಲಿರುವ ಹಾಗೂ ಸರ್ಕಾರಿ ಆಸ್ಪತ್ರೆಯ ಸಮೀಪವಿರುವ ಎರಡು ಆಟೋ ನಿಲ್ದಾಣಗಳ ಮೇಲ್ಛಾವಣಿಯ ಕಾಮಗಾರಿಗೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸಿದ್ದಾಪುರದ ಆಟೋ ಮಾಲೀಕರು ಹಾಗೂ ಚಾಲಕರ ಸಂಘದವರು ತನ್ನ ಬಳಿ ವಿನಂತಿಸಿಕೊAಡ ಮೇರೆಗೆ ತಾನು ಸಿದ್ದಾಪುರದಲ್ಲಿ ಎರಡು ಆಟೋ ನಿಲ್ದಾಣಗಳ ಮೇಲ್ಛಾವಣಿಗಳಿಗೆ ಅನುದಾನವನ್ನು ನೀಡಿದ್ದು, ಅಭಿವೃದ್ಧಿಪಡಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಸಿದ್ದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ಎಸ್.ಬಿ. ಪ್ರತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎಸ್. ವೆಂಕಟೇಶ್, ಕೆ.ಯು.ಮಜೀದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರುಗಳಾದ ಪಳನಿಸ್ವಾಮಿ, ಜಾಫರ್ ಆಲಿ, ಶೂಕರ್, ದೇವಜಾನು, ವಿ.ಕೆ. ಬಶೀರ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಅನಿಲ್, ಶೀನಪ್ಪ, ಚೇಕು, ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳಾದ ಹೆಚ್.ಎಸ್. ರವಿ, ಕರ್ಪಯ್ಯ ಸಿದ್ದಾಪುರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷರುಗಳಾದ ಕೆ.ವಿ. ಸುರೇಶ್, ಸಲೀಂ ಇನ್ನಿತರರು ಹಾಜರಿದ್ದರು.