ನಾಪೋಕ್ಲು, ನ. ೧೯: ವಿಶ್ವ ಹಿಂದೂ ಪರಿಷದ್ ವತಿಯಿಂದ ೧೧ನೇ ವರ್ಷದ ಕಾವೇರಿ ಆರತಿ ಕಾರ್ಯಕ್ರಮವನ್ನು ತಾ.೨೪ರಂದು ಸಂಜೆ ೫ ಗಂಟೆಗೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಜನೆ, ವೇದಘೋಷ ಹಾಗೂ ಕಾವೇರಿ ಮಾತೆಗೆ ಆರತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷದ್ ದಕ್ಷಿಣ ಪ್ರಾಂತ ಕಾರ್ಯದರ್ಶಿ ಬಿ.ಇ. ಸುರೇಶ್ ಭಾಗವಹಿಸಲಿದ್ದಾರೆ. ಸಂಸ್ಕೃತ ಮತ್ತು ವೇದ ಪರಿಣಿತರಾದ ಅಮೃತ ವರ್ಷಿಣಿ ಉಮೇಶ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕುಶಾಲನಗರದ ಅಖಂಡ ಭಾರತ ಸನಾತನ ಸಂತ ಸಮಿತಿಯ ರಾಷ್ಟಿçÃಯ ಉಪಾಧ್ಯಕ್ಷ ಝಫಡ್ ಪೀರ್ ಯೋಗಿ ರಾಜೇಶ್ ನಾಥ್ ಉಪಸ್ಥಿತರಿರಲಿದ್ದಾರೆ. ಭÀಕ್ತರು ಹಣತೆಯ ದೀಪ ಬೆಳಗಿಸುವ ಮೂಲಕ ಕಾವೇರಿ ಮಾತೆಗೆ ಭಕ್ತಿಪೂರ್ವಕ ನಮನ ಸಲ್ಲಿಸಲಿದ್ದಾರೆ.