ಕುಶಾಲನಗರ, ನ. ೧೯: ಕುಶಾಲನಗರ ಶ್ರೀ ಗಣಪತಿ ಜಾತ್ರೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಯುವ ಜಾತ್ರೋತ್ಸವ - ೨೦೨೬ರ ಪ್ರಯುಕ್ತ ಕೊಡಗು ಜಿಲ್ಲೆಯ ಪ್ರತಿಭಾವಂತ ಗಾಯಕರಿಗಾಗಿ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಯ ಪ್ರಥಮ ಹಂತದ ಆಡಿಷನ್ ಅನ್ನು ತಾ. ೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕುಶಾಲನಗರದ ಮಾರ್ಕೆಟ್ ರಸ್ತೆಯಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಮೊದಲನೇ ಮಹಡಿಯಲ್ಲಿ ಆಯೋಜಿಸಲಾಗಿದೆ.

ಕೊಡಗು ಜಿಲ್ಲೆಯ ಯುವ ಪ್ರತಿಭೆಗಳು, ಕಾಲೇಜು ವಿದ್ಯಾರ್ಥಿಗಳು, ಕಿಶೋರ-ಕಿಶೋರಿಯರು ಹಾಗೂ ಸಂಗೀತಾಸಕ್ತ ಸಾರ್ವಜನಿಕರಿಗೆ ತಮ್ಮ ಗಾಯನ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದ್ದು ಜಿಲ್ಲೆಯ ಎಲ್ಲಾ ಉದಯೋನ್ಮುಖ ಗಾಯಕ-ಗಾಯಕಿಯರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವಿ.ಪಿ. ಶಶಿಧರ್ - ೯೪೪೮೦೭೩೦೩೦, ವಿ.ಎಸ್. ಆನಂದ್ ಕುಮಾರ್ - ೯೫೯೧೭೯೭೯೯೯ ಅಥವಾ ಚಂದನ್ ಕುಮಾರ್ - ೯೮೪೪೦೯೦೯೦೩ ಅವರನ್ನು ಸಂಪರ್ಕಿಸುವAತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.