ಮಡಿಕೇರಿ ನ. ೧೯: ಪ್ರಸಕ್ತ (೨೦೨೬-೨೭) ಸಾಲಿಗೆ ಸೋಮವಾರಪೇಟೆ, ಕುಶಾಲನಗರ ತಾಲೂಕು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಸಹಾಯಧನ ಒದಗಿಸಲು ಅರ್ಜಿ ಆಹ್ವಾನಿಸಲಾಗಿದೆ.

೨೦೨೬-೨೭ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಕಾರ್ಯಕ್ರಮದಡಿ ರೈತರಿಗೆ ಶೇ.೯೦ ರಷ್ಟು ಸಹಾಯಧನದ ಸೌಲಭ್ಯವಿದೆ. ತೋಟಗಾರಿಕೆಯಲ್ಲಿ ಯಾಂತ್ರೀಕರಣ (ಎಸ್‌ಎಂಎಎA)ರಡಿ ಕಳೆ ಕೊಚ್ಚುವ ಯಂತ್ರ, ಮರ ಕತ್ತರಿಸುವ ಯಂತ್ರ, ತಳ್ಳುವ ಗಾಡಿ, ಅಲ್ಯೂಮಿನಿಯಂ ಏಣಿ, ಪವರ್ ವೀಡರ್, ಕಾಳುಮೆಣಸು ಬಿಡಿಸುವ ಯಂತ್ರ, ಅಡಿಕೆ ಬಿಡಿಸುವ ಯಂತ್ರಗಳಿಗೆ ಪರಿಶಿಷ್ಟ ಜಾತಿ. ಪರಿಶಿಷ್ಟ ಪಂಗಡ ವರ್ಗ, ಮಹಿಳೆಯರಿಗೆ, ರೈತರಿಗೆ ಶೇ.೫೦ ರಷ್ಟು ಸಹಾಯಧನ ಮತ್ತು ಇತರೆ ವರ್ಗದ ರೈತರಿಗೆ ಶೇ.೪೦ ರಷ್ಟು ಸಹಾಯಧನ ನೀಡಲಾಗು ವುದು. ರಾಷ್ಟಿçÃಯ ಎಣ್ಣೆಕಾಲು ಮತ್ತು ಎಣ್ಣೆ ತಾಳೆ ಅಭಿಯಾನ ಯೋಜನೆ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯ ಧನ ನೀಡಲಾಗುವುದು.

ಹೆಚ್ಚಿನ ವಿವರಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ರಾದ ಲಿಖಿತ ರಾಜ್ ತಿಳಿಸಿದ್ದಾರೆ.