ಮಡಿಕೇರಿ, ನ. ೧೯: ಮಡಿಕೇರಿಯ ಹೊಸ ಬಡಾವಣೆ ವ್ಯಾಪ್ತಿಯ ಭಗಂಡೇಶ್ವರ ಕೊಡವ ಅಭಿವೃದ್ಧಿ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಂತೋಷಕೂಟ ನಗರದ ಕೊಡವ ಸಮಾಜ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮುಂಡAಡ ಬಿ. ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಹಿರಿಯ ಸದಸ್ಯರುಗಳಾದ ರಾಜ್ಯದ ಮಾಜಿ ಕಾನೂನು ಸಚಿವರಾದ ಮೇರಿಯಂಡ ಸಿ. ನಾಣಯ್ಯ, ಕೊಡವ ಸಮಾಜ ಮಡಿಕೇರಿಯ ಮಾಜಿ ಅಧ್ಯಕ್ಷರಾದ ಮೂವೇರ ಕೆ. ಸುಬ್ಬಯ್ಯ, ಕೊಡಗು ಕ್ರೆಡಿಟ್ ಕೊ ಆಪರೇಟಿವ್‌ನ ಮಾಜಿ ಅಧ್ಯಕ್ಷರಾದ ಚೋವಂಡ ಡಿ. ಕಾಳಪ್ಪನವರು ಭಾಗವಹಿಸಿದ್ದರು.

ಸಂಘದ ಸದಸ್ಯರಾದ ಮುಂಡAಡ ಪಿ. ನಂದ ಅವರನ್ನು ಉನ್ನತ ಶಿಕ್ಷಣ ಪಡೆದು, ಡಾಕ್ಟರೇಟ್ ಪದವಿಯನ್ನು ಪಡೆದಿರುವ ಹಿನ್ನೆಲೆ ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು.

ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಹಲವು ಆಟೋಟ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಂಘದ ಗೌರವ ಕಾರ್ಯದರ್ಶಿ ಮಣವಟ್ಟಿರ ಈ. ಚಿಣ್ಣಪ್ಪ ಅವರು ನಿರೂಪಿಸಿ, ಲೆಕ್ಕಪತ್ರ ಮಂಡನೆ ಮತ್ತು ವರದಿ ಮಂಡಿಸಿದರು. ಸಂಘದ ಆಡಳಿತ ಮಂಡಳಿಯ ಪರವಾಗಿ ಸಂಘದ ಜಂಟಿ ಕಾರ್ಯದರ್ಶಿ ಮಂಡಿರ ನಂದ ನಂಜಪ್ಪ ವಂದಿಸಿದರು.