ನಾಪೋಕ್ಲು, ನ. ೧೯: ಧಾರವಾಡ ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ನವೆಂಬರ್ ೧೪ ಮತ್ತು ೧೫ ರಂದು ಧಾರವಾಡದ ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ೪೫ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-೨೦೨೬ ರಲ್ಲಿ ಕೊಡಗು ಜಿಲ್ಲೆಯ ಕ್ರೀಡಾಪಟುಗಳು ಅಮೋಘ ಪ್ರದರ್ಶನ ನೀಡಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆಯಿಂದ ಒಟ್ಟು ೨೪ ಕ್ರೀಡಾಪಟುಗಳು ಈ ಕೂಟದಲ್ಲಿ ಪಾಲ್ಗೊಂಡಿದ್ದು, ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಒಟ್ಟು ೧೭ ಮಂದಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ವಿಜೇತರು

ಹೊಸೋಕ್ಲು ಚಿನ್ನಪ್ಪ ೧೫೦೦ಮೀ, ೫೦೦೦ಮೀ ಮತ್ತು ೧೦.೦೦೦ಮೀ ಓಟ ಚಿನ್ನದ ಪದಕ , ಬಲ್ಯಮೀದೆರಿರ ಪ್ರಕಾಶ್ ೫ ಕಿ ಮೀ ನಡಿಗೆ ಚಿನ್ನದ ಪದಕ , ನಂದಿನೆರವAಡ ಟಿಪ್ಪು ಬಿದ್ದಪ್ಪ ೮೦೦ಮೀ, ೧೫೦೦ಮೀ ಮತ್ತು ೫೦೦೦ಮೀ ಓಟ ಬೆಳ್ಳಿ ಪದಕ , ಪಟ್ರಪಂಡ ಚಂಗಪ್ಪ ೪೦೦ಮೀ ಹಡಲ್ಸ್ ಚಿನ್ನ ೪೦೦ಮೀ ಓಟ ಮತ್ತು ೧೦೦ ಮೀ ಹಡಲ್ಸ್ ಬೆಳ್ಳಿ ಪದಕ, ಟಿ .ಹೆಚ್. ಗಣೇಶ್ ತೊರೆನೂರು ೧೫೦೦ ಮೀ ೫.೦೦೦ಮೀ ಮತ್ತು ೧೦.೦೦೦ಮೀ ಓಟ ಚಿನ್ನದ ಪದಕ , ಸೂದನ ಡಾಲಿ ೮೦೦ಮೀ, ೧.೫೦೦ಮೀ ಮತ್ತು ೫.೦೦೦ಮೀ ಓಟ ಬೆಳ್ಳಿ ಪದಕ , ಮೂಡೇರ ಪೊನ್ನಪ್ಪ ಶಾಟ್ ಪುಟ್ ಚಿನ್ನದ ಪದಕ, ಹ್ಯಾಮರ್ ಥ್ರೋ ಬೆಳ್ಳಿ ಪದಕ , ಕ್ಯಾಚಮಾಡ ವಿಶು ತಮ್ಮಯ್ಯ ೧.೫೦೦ಮೀ ಚಿನ್ನ, ಉದ್ದ ಜಿಗಿತ ಕಂಚಿನ ಪದಕ, ಅಮೆ ಚಂದ್ರಪ್ರ ೧೦೦ಮೀ. ಮತ್ತು ೪೦೦ಮೀ ಓಟ ಬೆಳ್ಳಿ ಪದಕ , ಅಮೆ ಜನಾರ್ದನ ೮೦೦ಮೀ ಓಟ ಚಿನ್ನದ ಪದಕ , ಸಂತೋಷ್ ಬಿ ಆರ್ ೧೦.೦೦೦ಮೀ ಓಟ ಬೆಳ್ಳಿ ಪದಕ , ಕಾವೇರಿ ಮನೆ ಭರತ್ ೧೦೦ಮೀ ಓಟ ಬೆಳ್ಳಿ ಪದಕ , ಕಟ್ಟೆಮನೆ ಹನಿ ಸೋಮಯ್ಯ ೪೦೦ಮೀ ಓಟ ಕಂಚಿನ ಪದಕ ,

ಮಹಿಳೆಯರ ವಿಭಾಗ

ಮುಲ್ಲೇರ ಪೊನ್ನಮ್ಮ ಪೂವಣ್ಣ ಶಾಟ್‌ಪುಟ್ ಡಿಸ್ಕಸ್ ಥ್ರೋ ಮತ್ತು ಜಾವೆಲಿನ್ ಥ್ರೋ ಚಿನ್ನದ ಪದಕ . ಚೇಮಿರ ಸೀತಮ್ಮ ಶಾಟ್ ಪುಟ್, ಡಿಸ್ಕಸ್ ಥ್ರೋ ಮತ್ತು ಹ್ಯಾಮರ್ ಥ್ರೋ ಚಿನ್ನದ ಪದಕ , ಅರಮಾಣಮಾಡ ಮಮತಾ ಮನು ಜಾಕ್ವೆಲಿನ್ ಥ್ರೋ ಚಿನ್ನ, ಶಾಟ್ ಪುಟ್ ಹ್ಯಾಮರ್ ಥ್ರೋ ಬೆಳ್ಳಿ ಪದಕ , ಪ್ರಮೀಳಾ ಶೆಟ್ಟಿ ೨೦೦ಮೀ ಓಟ ಉದ್ದ ಜಿಗಿತ ಬೆಳ್ಳಿ ಪದಕ , ಮುರೇರ ಶಾಂತಿ ಜಾವೆಲಿನ್ ಥ್ರೋ, ಕಂಚಿನ ಪದಕ.

ಈ ಮೇಲಿನ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿದ್ದಾರೆ. ಮತ್ತು ೨೦೨೭ರ ಜನವರಿ ತಿಂಗಳಿನಲ್ಲಿ ಲಕ್ನೋ ದಲ್ಲಿ ನಡೆಯಲಿದೆ. ಕೊಡಗಿನ ಕ್ರೀಡಾಪಟುಗಳ ಈ ಸಾಧನೆಗೆ ಜಿಲ್ಲೆಯ ಕ್ರೀಡಾಭಿಮಾನಿಗಳು ಹಾಗೂ ಅಸೋಸಿಯೇಷನ್ ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.