ಮಡಿಕೇರಿ, ನ. ೧೯: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ. ೨೯ ರಂದು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಚೆಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೂಡಡ್ಕ ಇಲ್ಲಿ ‘ಅರೆಭಾಷೆ ಸಾಹಿತ್ಯ ಸಮ್ಮೇಳನ-೨೦೨೬’ ಕಾರ್ಯಕ್ರಮವನ್ನು ನಡೆಸಲು ಉದ್ದೇಶಿಸಿದ್ದು, ಇದರ ಸಲುವಾಗಿ ಸ್ಮರಣ ಸಂಚಿಕೆ ಹೊರತರುತ್ತಿದ್ದು ಸ್ಮರಣ ಸಂಚಿಕೆಗೆ ‘ಅರೆಭಾಷೆ ಲೇಖನ, ಪ್ರಬಂಧ, ಕತೆ, ಕವನ, ಚುಟುಕು, ಗಾದೆಮಾತುಗಳು, ಒಗಟು ಇತ್ಯಾದಿ ಅರೆಭಾಷೆ ಬರಹಗಳನ್ನು ಆಹ್ವಾನಿಸಲಾಗಿದೆ.
ಲೇಖಕರು ತಮ್ಮ ಬರಹವನ್ನು ತಾ. ೨೫ ರೊಳಗೆ ಅಕಾಡೆಮಿ ಕಚೇರಿಗೆ ಕಳುಹಿಸಬೇಕು. ಬರಹಗಳನ್ನು ಕಳುಹಿಸಬೇಕಾದ ವಿಳಾಸ ಅಧ್ಯಕ್ಷರು/ ರಿಜಿಸ್ಟಾçರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿಕೃಪ ಕಟ್ಟಡ, ೧ ನೇ ಮಹಡಿ, ರಾಜಾಸೀಟ್ ರಸ್ತೆ, ಮಡಿಕೇರಿ emಚಿiಟ : ಚಿಡಿebಚಿseಚಿಛಿಚಿಜemಥಿ@gmಚಿiಟ.ಛಿom, ದೂ.ಸಂ. ೬೩೬೨೫೨೨೬೭೭ ನ್ನು ಸಂಪರ್ಕಿಸಬಹುದು ಎಂದು ರಿಜಿಸ್ಟಾçರ್ ಅವರು ತಿಳಿಸಿದ್ದಾರೆ.