ವೀರಾಜಪೇಟೆ, ನ. ೧೮: ಬೆಂಗಳೂರಿನಿAದ-ಕಾರೊAದರಲ್ಲಿ ಕೇರಳದ ಕಣ್ಣನೂರಿಗೆ ಹೋಗಿ ಮತ್ತೆ ವಾಪಸ್ ಬೆಂಗಳೂರಿಗೆ ಹಿಂದಿರುಗುವ ಸಂದರ್ಭ ವೀರಾಜಪೇಟೆ ಪೆರುಂಬಾಡಿ ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಕಾರು ಸುಟ್ಟು ಕರಕಲಾಗಿದ್ದು, ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನ ಜೈನಗರದಲ್ಲಿ ರುವ ಲೋಕನಾಥ್ ಎಂಬವರು ತಮ್ಮ ಕುಟುಂಬದೊAದಿಗೆ ಕೇರಳದ ಕಣ್ಣನೂರಿಗೆ ಹೋಗಿ ವಾಪಸ್ ಬೆಂಗಳೂರಿಗೆ ಮಾಕುಟ್ಟ ವೀರಾಜಪೇಟೆ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ಕಾರು ಆಪ್ ಆಗಿ ನಿಂತಿದೆ, ಸ್ಟಾರ್ಟ್ ಮಾಡಲು ಪ್ರಾರಂಭಿಸಿದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅದೆ ರಸ್ತೆಯಲ್ಲಿ ಎದುರಿ ನಿಂದ ಬರುತ್ತಿದ್ದ ವಾಹನಗಳ ಚಾಲಕರು ಕಾರಿನಲ್ಲಿದ್ದ ಲಗೇಜ್ ಬ್ಯಾಗ್ಗಳನ್ನು ಹೊರ ಹಾಕಿದ್ದಾರೆ. ಇದರಿಂದ ಹೆಚ್ಚು ಅನಾಹುತ ತಪ್ಪಿದಂತಾಗಿದೆ. ಕಾರು ಮಾತ್ರ ಸುಟ್ಟು ಕರಕಲಾಗಿ ಹೋಗಿದೆ ಎಂದು ಕಾರಿನ ಮಾಲಿಕ ಲೋಕನಾಥ್ ಮಾಹಿತಿ ನೀಡಿದ್ದಾರೆ.