ಮಡಿಕೇರಿ, ನ. ೧೮: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಬಳಿ ಕೊಡವ ಸಮಾಜಕ್ಕೆ ಸೇರಿದ ಜಾಗದಲ್ಲಿದ್ದ ೧೫೦ ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದ ಬೃಹತ್ ಅತ್ತಿ ಮರವು ೨೦೨೫ರಲ್ಲಿ ಸುರಿದ ಭಾರೀ ಮಳೆಗೆ ಧರೆಗುರುಳಿತ್ತು. ಈ ಹಿನ್ನೆಲೆಯಲ್ಲಿ ಆ ಸ್ಥಳದಲ್ಲಿ ಅಶ್ವತ್ಥ ಗಿಡ ನೆಟ್ಟು ಬೆಳೆಸಲಾಗಿದ್ದು, ಕೋಲ್ ಮಂದ್ ಅನ್ನು ನವೀಕರಿಸಲಾಗಿದೆ. ಮಂದ್ ಜಾಗದ ಸುತ್ತಲೂ ವ್ಯವಸ್ಥಿತ ರೀತಿಯಲ್ಲಿ ಬೇಲಿ ನಿರ್ಮಿಸಿ ಜಾಗವನ್ನು ಸಮತಟ್ಟುಗೊಳಿಸಲಾಗಿದೆ. ಸ್ಥಳದಲ್ಲಿ ಹೂಗಿಡಗಳನ್ನು ಬೆಳೆಯಲಾಗುತ್ತಿದೆ. ಒತ್ತಿನಲ್ಲಿ ಸಣ್ಣದಾದ ಕೊಠಡಿಯೊಂದನ್ನು ನಿರ್ಮಿಸಲಾಗಿದೆ. ಇದರ ಉದ್ಘಾಟನಾ ಕಾರ್ಯಕ್ರಮ ತಾ. ೨೧ರಂದು ನಡೆಯಲಿದೆ ಎಂದು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೫೦ ವರ್ಷಗಳ ಇತಿಹಾಸ ಹೊಂದಿರುವ ಮಡಿಕೇರಿಯ ಕೋಲ್ ಮಂದ್ ಕೊಡವ ಸಮುದಾಯದ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಆಚರಣೆಗಳೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಈ ಪ್ರದೇಶದಲ್ಲಿದ್ದ ಬೃಹತ್ ಅತ್ತಿ ಮರವು ೨೦೨೫ರಲ್ಲಿ ಸುರಿದ ಭಾರೀ ಮಳೆಯಿಂದ ಬಿದ್ದಿತ್ತು. ಈ ಹಿನ್ನೆಲೆ ಅದೇ ಸ್ಥಳದಲ್ಲಿ ಅಶ್ವತ್ಥ ಗಿಡವನ್ನು ನೆಟ್ಟು ಸೂಕ್ತ ನಿರ್ವಹಣೆ ಮತ್ತು ಆರೈಕೆಯಿಂದ ಗಿಡವೂ ಬೆಳೆದು ನಿಂತಿದೆ. ಇದು ಮಂದ್‌ನ ಪರಂಪರೆಯನ್ನು ಮುಂದುವರೆಸುವ ಸಂಕೇತವಾಗಿದೆ ಎಂದರು.

ಪ್ರತಿವರ್ಷ ಪುತ್ತರಿ ಹಬ್ಬದ ಪ್ರಯುಕ್ತ ಕೊಡವರು ಒಗ್ಗೂಡಿ ಸಾಂಪ್ರದಾಯಿಕ ಪುತ್ತರಿ ಕೋಲಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪುತ್ತರಿ ಹಬ್ಬದ ಪೂರ್ವಭಾವಿಯಾಗಿ ಕೋಲಾಟದಲ್ಲಿ ಭಾಗವಹಿಸುವವರಿಗೆ ತರಬೇತಿ ನೀಡುವ ಈಡ್ ಕಾರ್ಯಕ್ರಮವನ್ನು ಹಬ್ಬಕ್ಕೆ ಮೂರು ದಿನ ಮುನ್ನ ನಡೆಸಲಾಗುತ್ತದೆ. ಕೋಲ್‌ಮಂದ್ ಇರುವ ೩೦ ಸೆಂಟ್ ವಿಸ್ತೀರ್ಣದ ಜಾಗವನ್ನು ಕೊಡವ ಸಮಾಜಕ್ಕೆ ಬಹಳ ಹಿಂದೆಯೇ ಸರಕಾರ ಮಂಜೂರು ಮಾಡಿದೆ. ಇದೀಗ ಹೊಸದಾಗಿ ೯.೫೦ ಲಕ್ಷದಲ್ಲಿ ಆವರಣ ಗೋಡೆ ನಿರ್ಮಿಸಿ ಮಂದ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಮುತ್ತಪ್ಪ ಅವರು ವಿವರಿಸಿದರು. ೪ಏಳನೇ ಪುಟಕ್ಕೆ

(ಮೊದಲ ಪುಟದಿಂದ) ತಾ. ೨೧ ರಂದು ಸಂಜೆ ೪ ಗಂಟೆಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಮಂದ್ ಉದ್ಘಾಟಿಸಲಿದ್ದು, ಕೊಡವ ಸಮಾಜಗಳ ಒಕ್ಕೂಟ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಂದ್‌ನ ನಾಮಫಲಕ ಅನಾವರಣಗೊಳಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ,. ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯರುಗಳಾದ ಎಂ.ಪಿ. ಸುನಿಲ್ ಸುಬ್ರಮಣಿ, ಶಾಂತೆಯAಡ ವೀಣಾ ಅಚ್ಚಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಯುಕೋ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಜಬ್ಭೂಮಿ ಟ್ರಸ್ಟ್ ಅಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್ ಬೋಪಯ್ಯ, ಕನೆಕ್ಟಿಂಗ್ ಕೊಡವಾಸ್ ಸಂಚಾಲಕ ಶಾಂತೆಯAಡ ನಿರನ್ ನಾಚಪ್ಪ, ಕೊಡಗು ಏಕೀಕರಣ ರಂಗದ ಅಜ್ಜಿನಂಡ ತಮ್ಮು ಪೂವಯ್ಯ, ಕೊಡವ, ಅಮ್ಮ ಕೊಡವ ಟ್ರಸ್ಟ್ ಅಧ್ಯಕ್ಷ ಮುದ್ದಂಡ ಬಿ ದೇವಯ್ಯ, ಕೊಡವ ಮಕ್ಕಡ ಕೂಟ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಕೊಡವಾಮೆ ಕೊಂಡಾಟ ಸಂಚಾಲಕ ಚಾಮೇರ ದಿನೇಶ್, ಕೊಡವ ವಿದ್ಯಾನಿಧಿ ಉಪಾಧ್ಯಕ್ಷೆ ಕೊಡಂದೆರ ಸರೋಜ ಪೂವಣ್ಣ, ವೇಕ್ ಸಂಘಟನೆ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಕೊಡವ ಸಮಾಜ ಸಾಂಸ್ಕೃತಿಕ ಕೇಂದ್ರ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ಕನ್ನಂಡ ಕವಿತ ಬೊಳ್ಳಪ್ಪ, ಮಡಿಕೇರಿ ಕೊಡವ ಸಮಾಜ ಮಾಜಿ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ, ಮೂವೇರ ಶಂಭು ಸುಬ್ಬಯ್ಯ, ಆದಿ ಬ್ರಹ್ಮಗಿರಿ ವಾರಪತ್ರಿಕೆ ಸಂಪಾದಕ ಡಾ. ಉಳ್ಳಿಯಡ ಎಂ. ಪೂವಯ್ಯ ಪಾಲ್ಗೊಳ್ಳಲಿದ್ದಾರೆ.ಅಂದು ಸಂಜೆ ೬.೩೦ಕ್ಕೆ ಪುತ್ತರಿ ಕೋಲಾಟದ ಈಡ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ತಾ. ೨೩ ರ ತನಕ ಇದು ಮುಂದುವರೆಯಲಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಕೇಕಡ ಎ. ದೇವಯ್ಯ, ಗೌರವ ಕಾರ್ಯದರ್ಶಿ ಬೊಪ್ಪಂಡ ಸರಳ ಕರುಂಬಯ್ಯ, ಜಂಟಿ ಕಾರ್ಯದರ್ಶಿ, ಖಜಾಂಚಿ ನಂದಿನೆರವAಡ ಎಂ. ದಿನೇಶ್, ನಿರ್ದೇಶಕರುಗಳಾದ ಶಾಂತೆಯAಡ ವಿಶಾಲ್ ಕಾರ್ಯಪ್ಪ, ಕಾಳಚಂಡ ಎಂ. ಅಪ್ಪಣ್ಣ ಇದ್ದರು.