ಮಡಿಕೇರಿ, ನ. ೧೮: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿಗೆ ನೂತನ ಅಧ್ಯಕ್ಷರುಗಳ ಆಯ್ಕೆ ಬಹುತೇಕ ಅಂತಿಮಗೊAಡಿದ್ದು, ಸರಕಾರಿ ಆದೇಶವಷ್ಟೇ ಹೊರಬೀಳಬೇಕಿದೆ.

ಕೊಡವ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನೆರವಂಡ ಉಮೇಶ್ ಹಾಗೂ ಅರೆಭಾಷೆ ಅಕಾಡೆಮಿಗೆ ಪೊನ್ನಚ್ಚನ ಮೋಹನ್ ಅವರನ್ನು ನೇಮಕ ಮಾಡಲಾಗಿದೆ. ಇವರಿಬ್ಬರ ಆಯ್ಕೆ ಅಂತಿಮವಾಗಿದ್ದು, ಮುಖ್ಯಮಂತ್ರಿಗಳ ಸಮ್ಮತಿಯೊಂದಿಗೆ ಪಟ್ಟಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರವಾನೆಯಾಗಿದೆ ಎನ್ನಲಾಗಿದೆ. ಆದರೆ, ಇಲಾಖೆ ಮೂಲಕ ಇನ್ನು ಅಧಿಕೃತವಾಗಿ ಪಟ್ಟಿ ಬಿಡುಗಡೆಯಾಗಿಲ್ಲ. ಗುರುವಾರ ಇದು ಹೊರಬೀಳುವ ನಿರೀಕ್ಷೆ ಇದೆ.