ಕೂಡಿಗೆ, ನ. ೧೮: ಕುಶಾಲನಗರದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯು ಆಡಳಿತಾಧಿಕಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಬ್ದುಲ್ ನಭಿ ಅವರ ಅಧ್ಯಕ್ಷತೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಪ್ರಮುಖವಾಗಿ ೨೦೦ ಕೋಟಿ ಅನುದಾನದ ಕ್ರಿಯಾ ಯೋಜನೆ ಅನುಮೋದನೆ ಬಗ್ಗೆ ಚರ್ಚೆಗಳು ನಡೆದು ಅನುಮೋದಿಸಲಾಯಿತು. ನಂತರ ಸಭೆಯಲ್ಲಿ ತಾಲೂಕು ಪಂಚಾಯಿತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ, ವಿವಿಧ ಇಲಾಖೆಯಗಳ ಪ್ರಗತಿ ವರದಿ, ಹಾಗೂ ಅನುಷ್ಠಾನದಲ್ಲಿರುವ ಸರಕಾರಿ ಯೋಜನೆಯ ಪರಿಶೀಲನೆ ಹಾಗೂ ಹಣಕಾಸು ಮತ್ತು ಲೆಕ್ಕ ಪತ್ರಗಳಿಗೆ ಸಂಬAಧಿಸಿದAತೆ ಚರ್ಚೆಗಳು ನಡೆದವು.

ಸಭೆಯ ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಪ್ಪಣ್ಣ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸಂತೋಷ್ ಸ್ವಾಗತಿಸಿ, ವಂದಿಸಿದರು.