ಪೊನ್ನAಪೇಟೆ, ನ. ೧೮: ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ.೨೮ ರಂದು ನಡೆಯಲಿದೆ.
ಕುಂದಾ ಸಮೀಪದ ಕೈಮುಡಿಕೆ ಪುತ್ತರಿ ಕೋಲ್ ಮಂದ್ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿನ ತಕ್ಕಮುಖ್ಯಸ್ಥರು ಹಾಗೂ ಪ್ರಮುಖರ ಸಮ್ಮುಖದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರು ನಾಡಿನ ನಾಡ್ ತಕ್ಕರು, ಊರು ತಕ್ಕರು ಸೇರಿದಂತೆ ವಿವಿಧ ತಕ್ಕಮುಖ್ಯಸ್ಥರು ಹಾಗೂ ಮೂರು ನಾಡಿನ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆದು, ಕೋಲ್ ಮಂದನ್ನು ವಿಜೃಂಭಣೆಯಿAದ ಆಚರಿಸಲು ಹಾಗೂ ಸಾರ್ವಜನಿಕವಾಗಿ ವಿವಿಧ ಪೈಪೋಟಿಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ಪೈಪೋಟಿಗೆ ಹೆಸರನ್ನು ಸ್ಥಳದಲ್ಲೇ ನೋಂದಾಯಿಸಿಕೊಳ್ಳುವAತೆ ಹಾಗೂ ನೆರೆದವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲು ಸಭೆ ತೀರ್ಮಾನಿಸಿತು.
ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕಾರ್ಯದರ್ಶಿ ನಾಳಿಯಮಂಡ ಉಮೇಶ್ ಕೇಚಮಯ್ಯ ಸ್ವಾಗತಿಸಿ ವಂದಿಸಿದರು.