ದಿನಾಂಕ೧೧.೧೧.೨೦೨೬ನೇ ಬುಧವಾರ ಯೋಗೇಶ್ ಕೆ.ಪಿ. ಅವರು ದೈವಾಧೀನರಾದ ಸಂದರ್ಭ ದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾಂತ್ವನ ಹೇಳಿದ ಊರಿನವರಿಗೂ, ನೆರೆಕರೆಯವರಿಗೂ, ಬಂಧುಮಿತ್ರರಿಗೂ, ಕುಟುಂಬಸ್ಥರಿಗೂ, ಕೊಡಗು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದವರಿಗೂ, ಮಡಿಕೇರಿ ಕ್ಷೇತ್ರದ ಮಾನ್ಯ ಶಾಸಕರಿಗೂ, ಗಣ್ಯವ್ಯಕ್ತಿಗಳಿಗೂ ಹಾಗೂ ಎಲ್ಲಾ ಹಿತೈಷಿಗಳಿಗೂ ಈ ಮೂಲಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮೃತರ ತಿಥಿ ಕರ್ಮಾಂತರವನ್ನು ದಿನಾಂಕ ೨೧.೧೧.೨೦೨೬ನೇ ಶನಿವಾರ ಮಧ್ಯಾಹ್ನ ೧೨.೦೦ ಗಂಟೆಗೆ ಮಡಿಕೇರಿ ಚಾಮುಂಡೇಶ್ವರಿ ನಗರದಲ್ಲಿರುವ ಮೃತರ ಸ್ವಗೃಹದಲ್ಲಿ ನಡೆಸಲು ನಿಶ್ಚಯಿಸಿದ್ದು. ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ಪರಿಗಣಿಸಿ, ಆಗಮಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಬೇಕಾಗಿ ಬಯಸುವ,
ದುಃಖತಪ್ತ ತಾಯಿ : ನಿರ್ಮಲ ವಿ.ಜಿ.,
ಸಹೋದರ : ಪ್ರತಾಪ್ ಕೆ.ಪಿ. ಮತ್ತು ಸ್ನೇಹಿತರು.
ಚಾಮುಂಡೇಶ್ವರಿ ನಗರ, ಮಡಿಕೇರಿ ಮೊ.೯೯೮೦೦೧೦೭೨೪